ತಿಂಡಿ ಹೆಚ್‌ಡಿಕೆಗೆ..ಓಟು ನಮಗೆ ಎಂದ ಸದಾನಂದ ಗೌಡ..!

ಉಪಚುನಾವಣೆ ಕಣ ಈಗ ರಂಗೇರಿದ್ದು, ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಲೇ ಇರುತ್ತಾರೆ. ಇಂದು ಕೇಂದ್ರ ಸಚಿವ ಸದಾನಂದ ಗೌಡ ಹೆಚ್‌ಡಿಕೆಯನ್ನು ಲೇವಡಿಮಾಡಿದ್ದಾರೆ. ಇಂದು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬಿಜೆಪಿ ಆಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದ ಸದಾನಂದ ಗೌಡ್ರು, ಹೆಚ್‌ಡಿಕೆ ಎಲ್ಲರ ಮನೆಗೂ ಕೇವಲ ತಿಂಡಿಗೆ ಮಾತ್ರ ಹೋಗುತ್ತಾರೆ. ಆದ್ರೆ ಅವರ ಜೊತೆ ತಿಂಡಿ ಮಾತ್ರ ತಿನ್ನುತ್ತಾರೆ, ಆದ್ರೆ ಓಟು ನಮಗೆ ಹಾಕುತ್ತಾರೆ. ಅವರ ಜೊತೆ ಇರುವವರೆ ನಮ್ಮ ಜೊತೆ ಇದ್ದಾರೆ. ಅವರಿಗೆ ತಿಂಡಿ ಹಾಕಿದವರೆ ನಮ್ಮ ಜೊತೆ ಇದ್ದಾರೆ. ತಿಂಡಿ ಅವರಿಗೆ ಓಟು ನಮಗೆ ಎಂದು ಸದಾನಂದ ಗೌಡ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top