ತಲೆ ಕೂದಲು ಸಮಸ್ಯೆಗೆ ಈರುಳ್ಳಿಯಲ್ಲಿದೆ ರಾಮಬಾಣ..!

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲು ಕೆಲವರಿಗೆ ತಲೆಕೂದಲು ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದರಲ್ಲೇ ಮತ್ತೊಂದಿಷ್ಟು ಕೂದಲು ಉದುರುವ ಸಮಸ್ಯೆ ಅಥವಾ ಹೊಟ್ಟಿನ ಸಮಸ್ಯೆಯಿಂದ ಕೊರಗುತ್ತಾರೆ, ಅದಕ್ಕೆ ಇಲ್ಲಿದೆ ಒಂದು ಮನೆ ಮದ್ದು, ಈರುಳ್ಳಿಯನ್ನು ಹೀಗೆ ಬಳಸುವುದರಿಂದ ನಿಮ್ಮ ತಲೆ ಕೂಡದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

1. ನೀವು ತಲೆ ಸ್ನಾನ ಮಾಡಿದ ಬಳಿದ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತಲೆಯನ್ನು ತೊಳೆದುಕೊಳ್ಳುವುದರಿಂದ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳು ಬಹುಬೇಗ ದೂರವಾಗುತ್ತದೆ.

2. ಈರುಳ್ಳಿ ರಸವನ್ನು ತೆಗೆದು ತಲೆಗೆ ಹಚ್ಚಿಕೊಂಡು ಅರ್ಧಗಂಟೆಗಳ ಕಾಲ ಬಿಟ್ಟು ನಂತರ ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ಈ ರೀತಿ ವಾರದಲ್ಲಿ ಎರಡು ಬಾರಿಯಾದರು ಮಾಡಬೇಕು.

3. ಕೊಬ್ಬರಿ ಎಣ್ಣೆ,ಬಾದಾಮಿ ಎಣ್ಣೆ ಮಿಶ್ರಣ ಮಾಡಿ ಅದಕ್ಕೆ ಒಂದು ಚಮಚ ಈರುಳ್ಳಿ ರಸ ಹಾಕಿ ತಲೆ ಕೂದಲಿಗೆ ಹಾಕಿ ಮಸಾಜ್‌ ಮಾಡುವುದರಿಂದ ಕೂದಲು ಕಾಂತಿಯಾಗುವುದರ ಜೊತೆಯಲ್ಲಿ ಹೊಟ್ಟು ಕೂಡ ನಿವಾರಣೆಯಾಗುತ್ತದೆ.

4. ಈರುಳ್ಳಿ ಜೊತೆ ಜೇನು ತುಪ್ಪ ಸೇರಿಸಿಕೊಂಡು ಪ್ರತಿದಿನ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಈ ರೀತಿಯನ್ನು ಈರುಳ್ಳಿಯನ್ನು ಉಪಯೋಗಿಸಿಕೊಂಡು ತಲೆಗೂದಲು ಸಮಸ್ಯೆಯನ್ನ ಪರಿಹರಿಸಿಕೊಳ್ಳಬಹುದು, ಇನ್ನು ಸಮಸ್ಯೆ ಹೆಚ್ಚಾಗಿದ್ದರೆ ತಜ್ಞರನ್ನು ಒಮ್ಮೆ ಭೇಟಿಯಾಗುವುದು ಕೂಡ ಉತ್ತಮ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top