ತಮಿಳಿನಲ್ಲೂ ತಮ್ಮ ಪೊಗರು ತೋರಿಸಲು ಹೊರಟ ಧ್ರುವಾ ಸರ್ಜಾ..

ಆಕ್ಷನ್‌ ಪ್ರಿನ್ಸ್‌ ಧ್ರುವಾ ಸರ್ಜಾ ಅಭಿನಯದ ʻಪೊಗರುʼ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ರಿಲೀಸ್‌ ಆಗಿ ಸಿನಿರಸಿಕರನ್ನು ರಂಜಿಸಬೇಕಾಗಿತ್ತು, ಆದ್ರೆ ಕೊರೋನಾ ಹಾವಳಿಯಿಂದಾಗಿ ಥಿಯೇಟರ್‌ಗೆ ದರ್ಶನ ಕೊಡುವುದು ಸ್ವಲ್ಪ ತಡವಾಗುತ್ತಿದೆ.

ಈಗಾಗಲೇ ಪೊಗರು ಸಿನಿಮಾ ತಮ್ಮ ಹಾಡು ಮತ್ತು ಟ್ರೈಲರ್‌ ಮೂಲಕ ಸಖತ್‌ ಸೌಂಡ್‌ ಮಾಡುತ್ತಿದ್ದು, ಈಗಾಗಲೇ ಕನ್ನಡದ ಜೊತೆಯಲ್ಲಿ ತೆಲುಗಿನಲ್ಲೂ ಸಿನಿಮಾ ರಿಲೀಸ್‌ ಮಾಡೋದಾಗಿ ಚಿತ್ರತಂಡ ಅಧಿಕೃತವಾಗಿ ಹೇಳುವ ಜೊತೆಯಲ್ಲಿ ತೆಲುಗಿನಲ್ಲೂ ಕರಾಬು ಸಾಂಗ್‌ ರಿಲೀಸ್‌ ಮಾಡುವ ಮೂಲಕ ಹಾಡನ್ನು ತೆಲುಗಿನಲ್ಲೂ ಹಿಟ್‌ ಮಾಡಿದ್ದು ಆಗಿದೆ, ಇದೀಗ ಪೊಗರು ಚಿತ್ರತಂಡದಿಂದಿ ಲೇಟೆಸ್ಟ್‌ ಸುದ್ದಿಯೊಂದು ಹೊರಬಿದ್ದಿದೆ, ಈಗಾಗಲೇ ಚಿತ್ರದ ಎಲ್ಲಾ ಕೆಲಸ ಮುಗಿಸಿ ರಿಲೀಸ್‌ಗೆ ರೆಡಿಯಾಗಿರೋ ಪೊಗರು ಚಿತ್ರತಂಡ ಇದೀಗ ಪೊಗರು ಚಿತ್ರವನ್ನು ತಮಿಳಿನಲ್ಲೂ ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿದ್ಯಂತೆ ತಮಿಳಿನಲ್ಲಿ ʻಸೆಮ್ಮ ತಿಮಿರುʼ ಅನ್ನೋ ಟೈಟಲ್‌ ಮೂಲಕ ಪೊಗರು ಸಿನಿಮಾವನ್ನು ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿದೆ ಚಿತ್ರತಂಡ. ಸದ್ಯ ಚಿತ್ರಕ್ಕೆ ಸಂಬಂಧ ಪಟ್ಟ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಚಿತ್ರವನ್ನು ಜನವರಿ ಕೊನೆಯಲ್ಲಿ ತೆರೆಗೆ ಬರಲಿದೆ ಅಂತಾನೂ ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top