ತನ್ನ ಮಕ್ಕಳ ಪರಿಸ್ಥಿತಿಗೆ ಬೇಸರ ವ್ಯಕ್ತ ಪಡಿಸಿದ ಸನ್ನಿ ಲಿಯೋನ್!

ವಿಶ್ವದೆಲ್ಲೆಡೆ ಕೊರೊನಾ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿ ಮಾಡಿದ್ದು, ಭಾರತದಲ್ಲೂ ಸಹ ಆತಂಕ ಸೃಷ್ಟಿ ಮಾಡಿದೆ. ಈಗಾಗಲೇ ದೇಶದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಿಸಿದ್ದು, ಕೊರೊನಾ ವಿಚಾರವಾಗಿ ಜಾಗೃತಿ ಮೂಡಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಇನ್ನು ಅನೇಕ ಕಡೆ ಶಾಪಿಂಗ್ ಮಾಲ್, ಚಿತ್ರಮಂದಿರ ಸೇರಿದಂತೆ ಅನೇಕ ಜನನಿಬೀಡ ಪ್ರದೇಶಗಳನ್ನು ಬಂದ್ ಮಾಡಿದ್ದು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ. ಈ ಮದ್ಯೆ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬೇಸರದ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಹೌದು ಸನ್ನಿ ತನ್ನ ಮಕ್ಕಳಿಗೆ ಮಾಸ್ಕ್ ಧರಿಸಿ ನನ್ನ ಮಕ್ಕಳು ಹೀಗೆ ಬದುಕಬೇಕಾಗಿರುವುದು ಬೇಸರದ ಸಂಗತಿ ಎಂದು ಹೇಳಿಕೊಂಡಿದ್ದಾರೆ.

ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟಿದ್ದು ಈಗಾಗಲೇ ದೇಶದ ಜನರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಸನ್ನಿ ಲಿಯೋನ್ ತಮ್ಮ ಕುಟುಂಬವನ್ನು ಸೋಂಕಿನಿಂದ ರಕ್ಷಿಸಲು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದ್ದು . ತಮ್ಮ ಮೂರು ಮಕ್ಕಳಿಗೂ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಸುತ್ತಿದ್ದಾರಂತೆ. ಈ ವಿಚಾರವಾಗಿ ತಮ್ಮ ಸೋಶಿಯಲ್ ಮೀಡಯಾದಲ್ಲಿ ಬರೆದು ಕೊಂಡಿದ್ದದು ಕೊರೊನಾ ವೈರಸ್‍ನಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.

ಇನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಕ್ಕಳ ಫೋಟೋ ಹಾಕಿ `ಇದು ಹೊಸ ಯುಗ, ನಮ್ಮ ಮಕ್ಕಳು ಹೀಗೆ ಮಾಸ್ಕ್ ಧರಿಸಿ ಬದುಕಬೇಕಾಗಿರೋದು ದುಃಖದ ಸಂಗತಿ. ಆದ್ರೆ ಹೀಗೆ ಇರೋದು ತುಂಬಾ ಮುಖ್ಯ ಮಕ್ಕಳಿಗೆ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಸುತ್ತಿದ್ದೇನೆ ಎಂದು ಬರೆದು ತನ್ನ ಪತಿ ಜೊತೆ ಮೂವರು ಮಕ್ಕಳು ಮಾಸ್ಕ್ ಧರಿಸಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೊರೊನಾದಿಂದ ದೂರವಿರಿ,ಸೇಪ್ ಆಗಿರಿ ಎಂದು ಅಭಿಮಾನಿಗಳಿಗೂ ಸನ್ನಿ ಲಿಯೋನ್ ಕಿವಿಮಾತನ್ನು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top