ತನ್ನ ಒಳ ಉಡುಪುಗಳನ್ನು ಸೇಲ್‌ಮಾಡಿ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಈ ಹುಡುಗಿ..

30 ವರ್ಷದ ಯುವತಿಯೊಬ್ಬಳು ತಾನು ಬಳಸಿದ ಒಳ ಉಡುಪುಗಳನ್ನು ಮಾರಾಟ ಮಾಡೋ ಮೂಲಕ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ. ತನ್ನ ಒಳಉಡುಪುಗಳನ್ನು ಆನ್‌ಲೈನ್‌ನಲ್ಲಿ ಮಾರಾಟಮಾಡುತ್ತಿದ್ದು, ಸದ್ಯ ಈಕೆಯ ಇನ್ನರ್‌ವೇರ್‌ಗಳಿಗೆ ಆನ್‌ಲೈನ್‌ನಲ್ಲಿ ತುಂಬಾ ಬೇಡಿಕೆ ಇದೆ. ಈ ರೀತಿ ತನ್ನ ಒಳಉಡುಪುಗಳನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರೋ ಈ ಯುವತಿಯ ಹೆಸರು ಮೆಲ್‌ ಬೋರ್ನ್‌ ಈಕೆ ಆಸ್ಟ್ರೇಲಿಯಾದ ಯುವತಿ, ಸದ್ಯ ನ್ಯೂಕ್ಯಾಸ್ಟಲ್‌ ವಿಶ್ವವಿದ್ಯಾಲಯದ ಸ್ಟೂಡೆಂಟ್‌ ಆಗಿದ್ದು, ವೆಬ್‌ಸೈಟ್‌ ಮೂಲಕ ತನ್ನ ಒಳುಉಡುಪುಗಳನ್ನು ಮಾರಾಟ ಮಾಡುತ್ತಿದ್ದಾಳೆ.

ಈ ಒಳ ಉಡುಪಿನಿಂದ ಬಂದ ಹಣದಿಂದ ಆಕೆ ತನ್ನ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಒಂದು ದಿನ ತಾನೂ ಬಳಸಿದ್ದ ಹ್ಯಾಲೋವನ್‌ ಮಾಸ್ಕ್‌ ಅನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದಳು, ಅದು ಮಾರಾಟವಾದ ರೀತಿ ಮತ್ತು ಅದಕ್ಕೆ ಉಂಟಾದ ಬೇಡಿಕೆಯನ್ನು ನೋಡಿ ಮೆಲ್‌ ತನ್ನ ಒಳಉಡುಪುಗಳನ್ನು ಸೇಲ್‌ಮಾಡಲು ಪ್ಲಾನ್‌ ಮಾಡಿಕೊಂಡಳು. ಇದೀಗ ನಾನು ಗ್ರಾಹಕರ ಅನುಗುಣವನ್ನು ಬಟ್ಟೆಗಳನ್ನು ಮಾರುತ್ತಿದ್ದೇನೆ ಅಂತ ಹೇಳೋ ಮೆಲ್‌, ತನ್ನ ಹ್ಯಾಂಡ್‌ ಗ್ಲೌಸ್‌ ಒಂದು ಗಂಟೆಯಲ್ಲಿ 15 ಪೌಂಡ್‌ಗೆ ಅಂದರೆ 1400 ರೂಪಾಯಿಗೆ ಖರೀದಿಯಾಯ್ತು ಎಂದು ಆಶ್ಚರ್ಯದಿಂದ ಹೇಳಿಕೊಂಡಿದ್ದಾಳೆ.

ಸದ್ಯ ತನ್ನ ಒಳುಉಡುಪು ಮಾರಾಟದಿಂದ ಪ್ರತಿತಿಂಗಳು 600 ಪೌಂಡ್‌ ಸಂಪಾದನೆ ಮಾಡುತ್ತಿರೋ ಈ ಯುವತಿ ಒಂದು ಒಳ ಉಡುಪನ್ನು ಎರಡು ದಿನ ಬಳಸುತ್ತಾಳೆ, ಬೆಳಗ್ಗೆ ವಾಕ್‌ನಿಂದ ಹಿಡಿದು ಸಂಜೆಯ ಮಲಗೋ ವರೆಗೆ ಆ ಒಳ ಉಡುಪನ್ನು ಬಳಸಿ ಮಾರನೇದಿನ ಆ ಬಟ್ಟೆಯನ್ನು ಒಗೆದು ಮಾರಾಟಕ್ಕೆ ಇಡುತ್ತಾಳೆ. ಸದ್ಯ ಮೆಲ್‌ಗೆ ಹಲವು ಗ್ರಾಹಕರು ವಿಚಿತ್ರ ವಿಚಿತ್ರ ಬೇಡಿಕೆಗಳನ್ನು ಸಹ ಇಟ್ಟಿದ್ದಾರೆ.

ಕೆಲವ್ರು ಟೈಟ್‌ ಪ್ಯಾಂಟ್‌ ಹಾಕಿ ವಾಕ್‌ ಮಾಡಿ ಮತ್ತು ಕೆಲವ್ರು ಒಳಉಡುಪು ಜೊತೆ ಹೈ ಹೀಲ್ಡ್‌ ಹಾಕಿ ಹೂವಿನ ಮೇಲೆ ವಾಕ್‌ ಮಾಡಿ ಎಂದು ಬೇಡಿಕೆ ಇಟ್ಟಿದ್ದರು., ಇನ್ನು ಗ್ರಾಹಕರ ಬೇಡಿಕೆಯಂತೆ ಮೆಲ್‌ ಕೂಡ ವಾಕ್‌ ಮಾಡಿ ವಿಡಿಯೋ ಮಾಡಿದ್ದು, ಈ ವಿಡಿಯೋದಿಂದ 4500 ಸಾವಿರ ರೂಪಾಯಿ ಗಳಿಸಿದ್ದಾಳೆ. ಸದ್ಯ ಮಾರ್ಚ್‌ ತಿಂಗಳಿನಿಂದ ತನ್ನ ಒಳಉಡುಪುಗಳನ್ನು ಬಳಸಿ ನಂತರ ಅದನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ.

ಅದಕ್ಕೆ ಹೇಳೋದು ದುಡಿಯೋದಕ್ಕೆ ನಾನಾ ದಾರಿಗಳಿವೆ, ನಾವೂ ಆಯ್ಕೆ ಮಾಡಿಕೊಳ್ಳುವ ವಿಧಾನ ಸರಿ ಇರಬೇಕು ಅನ್ನೋದಕ್ಕೆ ಈ ಯುವತಿಯೇ ಸಾಕ್ಷಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top