ತನ್ನ ಆಸೆಯಂತೆ ಮೈದಾನದಲ್ಲೇ ಸವಾನಪ್ಪಿದ ವೃದ್ಧಾ..!

ಪ್ರತಿಯೊಬ್ಬರಿಗೂ ತಾವೂ ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಅಥವಾ ಕಾರ್ಯ ನಿರ್ವಹಿಸುವಾಗ ಈ ಜೀವ ಹೋದರೆ ಸಾಕು ಅನ್ನೋ ಹಲವರ ಆಸೆ, ಅಂತಹದ್ದೇ ಆಸೆಯನ್ನು ಇಟ್ಟುಕೊಂಡಿದ್ದ ವೃದ್ಧರೊಬ್ಬರು ಸಾವನಪ್ಪಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

78 ವರ್ಷದ ಬಕ್ಷೀಶ್‌ ಸಿಂಗ್‌ ತನ್ನ ಆಸೆಯಂತೆ ಸಾವನಪ್ಪಿದ ವೃದ್ಧ ಪಂಜಾಬ್‌ನಲ್ಲಿ ಮಾಸ್ಟರ್‌ ಅಥ್ಲೇಟಿಕ್‌ ಅಸೋಸಿಯೇಷನ್‌ ವೃದ್ಧರಿಗೆ ಅಥ್ಲೆಟಿಕ್‌ ಮೀಟ್‌ ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಬಕ್ಷೀಶ್‌ ಸಿಂಗ್‌ ಕೂಡ ಭಾಗವಹಿಸಿದ್ರು , ಇನ್ನು ಬಕ್ಷೀಶ್‌ ಸಿಂಗ್‌ 1500 ಮೀಟರ್‌ ಓಟದಲ್ಲಿ ಓಡಿ ಚಿನ್ನದ ಪದಕವನ್ನು ಸಹ ಗೆದ್ದಿದ್ದರು.

ಕಳೆದ ಶನಿವಾರ ಈ ಅಥ್ಲೆಟಿಕ್‌ ಮೀಟ್‌ ಆಯೋಜಿಸಲಾಗಿತ್ತು. 1500 ಮೀ. ಓಟದಲ್ಲಿ ಬಕ್ಷೀಶ್‌ ಚಿನ್ನದ ಪದಕ ಗೆದ್ದ ನಂತರ ಸಂತಸ ವ್ಯಕ್ತಪಡಿಸಿದ್ರು, ಅಲ್ಲದೇ ವಿಶ್ರಾಂತಿ ಪಡೆಯಲು ಬಕ್ಷೀಶ್‌ ಮೊದಲು ತಮ್ಮ ಉಡುಪನ್ನು ತೊಡಲು ಹೋಗಿದ್ದಾರೆ, ಆದ್ರೆ ಅವರಿಗೆ ಬಟ್ಟೆ ಹಾಕಿಕೊಳ್ಳಲು ಆಗಲಿಲ್ಲ, ಈ ವೇಳೆ ಕುಸಿದು ಬಿದ್ದಿದ್ದರು ತಕ್ಷಣ ಹತ್ತಿರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತ ಪಟ್ಟಿರುವದನ್ನು ಹೇಳಿದ್ದರು. ಇನ್ನು ಬಕ್ಷೀಶ್‌ ಸಿಂಗ್‌ಗೆ ಓಡುವುದು ಎಂದರೆ ತುಂಬಾ ಇಷ್ಟ . ಅಲ್ಲದೇ ಅವರು ಯಾವಾಗಲೂ ನಾನು ಸತ್ತರೆ ಮೈದಾನದಲ್ಲಿಯೇ ಆಟಗಾರನಾಗಿ ಸಾಯಬೇಕು ಎಂದು ಹೇಳುತ್ತಿದ್ದರು ಎಂದು ಬಕ್ಷೀಶ್ ಸ್ನೇಹಿತರು ತಿಳಿಸಿದ್ರು. ಮತ್ತು ಅದರಂತೆ ಅವರು ಅವರ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಇನ್ನು ಬಕ್ಷೀಶ್‌ ಸಿಂಗ್‌ ಮೊದಲು ಸೈನ್ಯದಲ್ಲಿ ಕಾರ್ಯನಿರ್ವಹಿಸಿ ನಿವೃತಿ ಪಡೆದಿದ್ದರು, ಬಳಿಕ ಶಿಕ್ಷಕರಾಗಿ ಸಹ ಕೆಲಸ ಮಾಡಿದ್ದರು. 1982ರಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ಶುರುಮಾಡಿದ್ದರು, ಬಕ್ಷೀಶ್‌ ಇದುವರೆಗೂ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದು.ಇವರು 800,1500, ಹಾಗೂ 5000 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top