
ತನ್ನ ಅರ್ಧ ಆಸ್ತಿಯನ್ನು ನಾಯಿಯ ಹೆಸರಿಗೆ ಬರೆದಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ನಡೆದಿದೆ. ನಾರಾಯಣ ವರ್ಮ ಎಂಬ 50 ವರ್ಷದ ರೈತ ತನ್ನ ಆಸ್ತಿಯಲ್ಲಿ ಅರ್ಧ ಭಾಗ ತನ್ನ ಸಾಕು ನಾಯಿ ಮತ್ತು ಇನ್ನರ್ಧ ಭಾಗವನ್ನು ತನ್ನ ಎರಡನೇ ಪತ್ನಿ ಹೆಸರಿಗೆ ಬರೆದಿದ್ದಾರೆ. ತನ್ನ ಮಕ್ಕಳ ದರ್ವರ್ತನೆಯಿಂದ ಬೇಸತ್ತ ನಾರಾಯಣ ವರ್ಮ ಈ ರೀತಿ ಮಾಡಿದ್ದು, ತನ್ನ ಬಳಿ ಇರೋ 18 ಎಕರೆ ಆಸ್ತಿಯಲ್ಲಿ ಅರ್ಧ ಭಾಗವನ್ನು ತನ್ನ ಸಾಕು ನಾಯಿ ಜಾಕಿ ಹೆಸರಿಗೆ ಬರೆದಿದ್ದಾರೆ ಮತ್ತು ಇನ್ನುಳಿದ ಅರ್ಧ ಭಾಗವನ್ನು ಎರಡನೇ ಪತ್ನಿ ಚಂಪಾ ಎನ್ನುವವರ ಹೆಸರಿಗೆ ಬರೆದಿದ್ದಾರೆ.
ಇನ್ನು ನಾರಾಯಣ ವರ್ಮ ಅವರಿಗೆ ಮೊದಲ ಪತ್ನಿ ಬದುಕಿದ್ದು ಆಕೆಗೆ ಮೂರು ಹೆಣ್ಣು ಮಕ್ಕಳಿದ್ದು ಎರಡನೇ ಪತ್ನಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ.
ಆದರೆ ವರ್ಮ ನಾಯಿ ಮತ್ತು ಎರಡನೇ ಪತ್ನಿ ಹೆಸರಿಗೆ ಮಾತ್ರ ತನ್ನ ಆಸ್ತಿಯನ್ನು ವಿಲ್ ಮಾಡಿಸಿದ್ದಾರೆ. ಅಲ್ಲದೇ ನನ್ನ ಎರಡನೇ ಪತ್ನಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ನನ್ನಸಾಕು ನಾಯಿ ಜಾಕಿ ಇವರಿಬ್ಬರು ನನ್ನ ಪ್ರೀತಿ ಪಾತ್ರರು ಅದ್ದರಿಂದ ನನ್ನ ಆಸ್ತಿ ಇವರಿಬ್ಬರ ಹೆಸರಿಗೆ ಬರೆದಿದ್ದೇನೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೇ ನನ್ನ ಸಾಕು ನಾಯಿ ಜಾಕಿಯನ್ನು ಯಾರು ನೋಡಿಕೊಳ್ಳುತ್ತಾರೋ ಅವರು ಜಾಕಿ ಹೆಸರಿನಲ್ಲಿ ಇರೋ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳ ಬೇಕು ಎಂದು ವಿಲ್ ಮಾಡಿಸಿದ್ದಾರೆ ರೈತ ನಾರಾಯಣ ವರ್ಮಾ.