ತಂದೆಯ ಅಗಲಿಕೆಯಿಂದ ಭಾವುಕರಾದ ಆರ್‌ಸಿಬಿ ವೇಗದ ಬೌಲರ್‌

ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರೋ ಆರ್‌ಸಿಬಿ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಅವರ ತಂದೆ ಮೊಹಮ್ಮದ್‌ ಘೌಸ್‌ ನಿಧರಾಗಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿರಾಜ್‌ ತಂದೆ ಹೈದರಬಾದ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಿದ್ದಾರೆ. ಅವರಿಗೆ ೫೩ ವರ್ಷ ವಯಸ್ಸಾಗಿತ್ತು.

ಇಂಡಿಯಾ ಆಸ್ಟ್ರೇಲಿಯಾ ಸರಣಿಗೆರ ಆಯ್ಕೆಯಾಗಿರೋ ಸಿರಾಜ್‌ಗೆ ಅಭ್ಯಾಸ ಮುಗಿಸಿ ವಾಪಸ್ಸಾದಾಗ ವಿಚಾರವನ್ನು ತಿಳಿಸಿದ್ದು ತಂದೆಯ ಅಗಲಿಕೆಯಿಂದ ಸಿರಾಜ್‌ ಆಘಾತಕ್ಕೆ ಒಳಗಾಗಿದ್ದಾರೆ.

ಮಗನೆ ನನ್ನ ದೇಶ ಹೆಮ್ಮೆ ಪಡುವಂತೆ ನೀನು ಸಾಧನೆ ಮಾಡಬೇಕು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು, ನಾನಾದನ್ನು ಖಂಡಿತಾ ನೆರವೇರಿಸುತ್ತೇನೆ. ಅಪ್ಪ ಆಟೋ ಓಡಿಸುತ್ತ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನೋದು ನನಗೆ ಗೊತ್ತು ಎಂದು ಸಿರಾಜ್‌ ಭಾವುಕರಾದರು.

ಸದ್ಯ ಸಿರಾಜ್‌ ಆಸ್ಟ್ರೇಲಿಯಾದಲ್ಲಿ ಇರೋದರಿಂದ ಅವರಿಗೆ ಅಪ್ಪನ ಕೊನೆಯ ಬಾರಿ ಮುಖ ನೋಡುವ ಅವಕಾಶವು ಇಲ್ಲದಂತಾಗಿದ್ದು, ಕ್ವಾರಂಟೈನ್‌ ನಿಯಮದ ಪ್ರಕಾರ ಸಿರಾಜ್‌ ಆಸ್ಟ್ರೇಲಿಯಾದಿಂದ ಬರಲು ಸಾಧ್ಯವಾಗುತ್ತಿಲ್ಲ.

ಆರ್‌ಸಿಬಿಯ ಆಪತ್ಭಾಂದ ಎಬಿ ಡಿವಿಲಿಯರ್ಸ್‌ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.ಹೌದು ಎಬಿಡಿ ಇದೀಗ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಐಪಿಎಲ್‌ ಮುಗಿಯುದ್ದಂತೆ ಸದ್ಯ ಯಾವ ಲೀಗ್‌ನಲ್ಲಿ ಭಾಗವಹಿಸುವಿದಲ್ಲ,ನಾನು ತಂದೆಯಾಗುತ್ತಿದ್ದೇನೆ ಎಂದು ಹೇಳಿಕೊಂಡದ್ದ ಎಬಿಡಿ ದಂಪತಿಗೆ 11ನೇ ತಾರೀಖು ಮಗುವಿನ ಜಜನವಾಗಿದ್ದು, ಈ ವಿಚಾರವಾಗಿ ಎಬಿಡಿ ತಮ್ಮ ಇನ್ಸ್ಟ್ರಾಗ್ರಾಮ್‌ಗನಲ್ಲಿ ಪೋಸ್ಟ್‌ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಎಬಿಡಿ ದಂಪತಿಗಳಿಗೆ ಈಗಾಗಲೇ ಎರಡು ಮಕ್ಕಳಿದ್ದು, ಇದೀಗ ಮೂರನೇ ಮಗುವಿಗೆ ವೆಲ್‌ಕಮ್‌ ಹೇಳಿದ್ದಾರೆ.

ಐಪಿಎಲ್‌ ಮುಗಿದರು ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ವಿಚಾರದಲ್ಲಿ ಚರ್ಚೆಗಳು ಮಾತ್ರ ಮುಗಿಯುತ್ತಿಲ್ಲ, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡದೇ ಇರುವ ವಿಚಾರದಿಂದ ಹಿಡಿದು, ಮುಂಬೈ ಮತ್ತು ಆರ್‌ಸಿಬಿ ಮ್ಯಾಚ್‌ ವೇಳೆ ಆದ ಘಟನೆಗಳ ಜೊತೆಯಲ್ಲಿ ಟ್ವೀಟರ್‌ನಲ್ಲಿ ಲೈಕ್‌ ಡಿಸ್‌ಲೈಕ್‌ಗಳ ವರೆಗೆ ಒಂದಿಲ್ಲೊಂದು ಚರ್ಚೆಗಳು ನಡೀತಾ ಇದ್ದು, ವಿರಾಟ್‌ ಮತ್ತು ಸೂರ್ಯಕುಮಾರ್‌ ನಡುವೆ ಮುನಿಸು ಉಂಟಾಗಿದೆ ಅಂತ ಹೇಳಲಾಗುತ್ತಿತ್ತು, ಆದ್ರೀಗ ಸೂರ್ಯಕುಮಾರ್‌ ಯಾದವ್‌ ಇದಕ್ಕೆಲ್ಲಾ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಹೌದು ಸೂರ್ಯಕುಮಾರ್‌ ವಿರಾಟ್‌ ಜೊತೆಯಲ್ಲಿ ಯಾವುದೇ ಮುನಿಸಿಲ್ಲ ಎಂದು ಮೌನ ಮುರಿದು ಮಾತನಾಡಿದ್ದು, ಮೈದಾನದಲ್ಲಿ ಅವತ್ತಿನ ಮ್ಯಾಚ್‌ನಲ್ಲಿ ನಮ್ಮಿಬ್ಬರ ಮುಖಾಮುಖಿ ಮೋಜಿನ ಸಂಗತಿಯಾಗಿತ್ತು. ಪಂದ್ಯದ ಬಳಿಕವೂ ನನಗೆ ವಿರಾಟ್‌ ಶುಭಾಶಯ ಕೋರಿದ್ರು, ಆ ದಿನ ನಮಗೇನೂ ಭಿನ್ನವಾಗಿರಲಿಲ್ಲ ಎಂದಿನ ಪಂದ್ಯದಂತೆ ಇತ್ತು ಅಂತ ಸೂರ್ಯಕುಮಾರ್‌ ಯಾದವ್‌ ಹೇಳಿದ್ದಾರೆ. ಆ ಮೂಲಕ ವಿರಾಟ್‌ ಮತ್ತು ನನ್ನ ನಡುವೆ ಯಾವುದೇ ಮುನಿಸಿಲ್ಲ ಅಂತ ಹೇಳಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ವಿರಾಟ್‌ ಮತ್ತು ಸೂರ್ಯಕುಮಾರ್‌ ಯಾದವ್‌ ನಡುವೆ ಕೋಲ್ಡ್‌ ವಾರ್‌ ನಡೆಯುತ್ತಿದೆ ಅಂತ ಅನಿಸುತ್ತದೆಯಾ ನಿಮ್ಮ ಅಭಿಪ್ರಾಯವೇನು ನಮಗೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top