ಡ್ರಗ್ಸ್ ದಾಸನಾಗಿದ್ದ ಅಣ್ಣನಿಂದ ತಂಗಿ ಅತ್ಯಾಚಾರ-8ತಿಂಗಳ ಗರ್ಭಿಣಿ

ಡ್ರಗ್ಸ್ ವ್ಯಸನಾಗಿದ್ದ ಅಣ್ಣ ತನ್ನ ತಂಗಿಯ ಮೇಲೆ ಆತ್ಯಾಚಾರವೆಸಗಿ ಆಕೆ 8 ತಿಂಗಳ ಗರ್ಭಿಣಿಯಾಗಿರೋ ವಿಲಕ್ಷಣ ಘಟನೆ ಚಂಡೀಘಡದಲ್ಲಿ ನಡೆದಿದೆ. ಈ ವಿಚಾರ ತಡವಾಗಿ ಬೆಳಕಿ ಬಂದಿದ್ದು,18 ವರ್ಷದ ಡ್ರಗ್ಸ್ ವ್ಯಸನಿಯಾಗಿದ್ದ ಅಣ್ಣನೇ ತಂಗಿಯನ್ನು ಅತ್ಯಾಚಾರ ವೆಸಗಿದ್ದಾನೆ.

9ನೇ ತರಗತಿ ಓದುತಿದ್ದ ಅಪ್ರಾಪ್ತ ಹುಡುಗಿಯ ತಾಯಿ ಕಣ್ಣು ಕಾಣಿಸುತ್ತಿರಲಿಲ್ಲ ಇದನ್ನೇ ಬಂಡವಾಳವಾಗಿಸಿಕೊಂಡ ಅಣ್ಣ ತಂಗಿಯ ಮೇಲೆ ಅತ್ಯಾಚಾರ ವೆಸಗಿದ್ದಾನೆ. ಒಂದು ದಿನ ಯುವತಿಗೆ ಹೊಟ್ಟೆನೋವು ವಿಪರೀತವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ ಆಕೆ 8 ತಿಂಗಳ ಗರ್ಭಿಣಿ ಎಂದು ಗೊತ್ತಾಗಿದ್ದು, ಆಕೆಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಸಹಾಯವಾಣಿ ಆರೈಕೆಗೆ ಬಾಲಕಿಯನ್ನು ಕಳುಹಿಸಿ ಕೊಡಲಾಯಿತು.

ಇನ್ನು ಬಾಲಕಿಯನ್ನು ತನಿಖೆ ನಡೆಸಿದಾಗ, ಆಕೆ ಎಲ್ಲಾ ವಿಷಯವನ್ನು ಹೇಳಿದ್ದು, ಡ್ರಗ್ಸ್ ವ್ಯಸನಿಯಾಗಿದ್ದ ಅಣ್ಣ ತನ್ನ ಮೇಲೆ ಡಿಸೆಂಬರ್‍ನಲ್ಲಿ ನನ್ನ ಮೇಲೆ ಅತ್ಯಾಚಾರ ವೆಸಗಿದ್ದ, ನಂತರ ಆತನ ಸ್ನೇಹಿತ 25 ವರ್ಷದ ಯುವಕ ಮನೆಗೆ ಆಗಾಗೇ ಬಂದು ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಬಾಲಕಿ ಹೇಳಿದ್ದಾಳೆ.

ಇನ್ನು ಇದೇ ವೇಳೆ ಆಘಾತಕಾರಿ ವಿಷಯವನ್ನು ಬಾಲಕಿ ಹೇಳಿದ್ದು, ಇವರ ಮನೆಯಲ್ಲಿ ಬಾಡಿಗೆಗೆ ಇದ್ದ 51 ವರ್ಷದ ವ್ಯಕ್ತಿ ಕೂಡ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಹೇಳಿದ್ದಾಲೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿ ಸಹೋದರಿ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top