ಡ್ರಗ್ಸ್‌ ವಿಚಾರದಲ್ಲಿ ಚಿರು ಸರ್ಜಾ ಹೆಸರು ಬಂದಿದ್ದು ಬೇಸರವಾಗಿದೆ -ದರ್ಶನ್‌..

ಡ್ರಗ್ಸ್‌ ವಿಚಾರದಲ್ಲಿ ಚಿರು ಹೆಸರು ಕೇಳಿ ನನಗೆ ಬೇಸರವಾಯಿತು, ಎಂದು ದರ್ಶನ್‌ ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರೋ ದರ್ಶನ್‌ ಒಬ್ಬರು ಫಸ್ಟ್‌ ಕ್ಲಾಸ್‌ ಬರ್ತಾರೆ, ಫೇಲ್‌ ಆಗೋರು ಇರ್ತಾರೆ ಹಾಗಂತ ಇಡೀ ಕ್ಲಾಸ್‌ ಝೀರೋ ಅಂತೀರಾ, ಹಾಗೇ ಸ್ಯಾಂಡಲ್‌ವುಡ್‌ ಕೂಡ ಅಂತ ದರ್ಶನ್‌ ಹೇಳಿದ್ದಾರೆ.

ಡ್ರಗ್ಸ್‌ ವಿಚಾರದಲ್ಲಿ ಚಿರು ಹೆಸರನ್ನು ಹೇಳುತ್ತಿರುವುದು ನನಗೆ ತುಂಬಾ ಬೇಸರವಾಯಿತು ಚಿರು ಸತ್ತು ಮೂರು ತಿಂಗಳು ಆಗಿದೆ. ಅವನು ಎಲ್ಲಿದ್ದಾನೋ ಹೇಗಿದ್ದಾನೋ ಗೊತ್ತಿಲ್ಲ, ಒಂದು ವೇಳೆ ಈ ಕೇಸ್‌ ಆಗಿ ಸಾಬೀತಾಯಿತು ಅಂದ್ರೆ ಅವನಿಗೆ ಶಿಕ್ಷೆ ಕೊಡಲು ಆಗುತ್ತಾ , ಸತ್ತೋನು ಕೊಲೆಗಾರ ಆದ್ರು ವರ್ಷದ ತಿಥಿ ಮಾಡುತ್ತೇವೆ, ಸತ್ತ ಮೇಲೆ ಒಳ್ಳೆಯದನ್ನು ಮಾತಾಡೋಣ ದಯವಿಟ್ಟು ಕೆಟ್ಟದಂತೂ ಮಾತನಾಡಬೇಡಿ ಎಂದು ದರ್ಶನ್‌ ಮನವಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top