ಡ್ರಗ್ಸ್‌ ಜಾಲ ಸ್ಯಾಂಡಲ್‌ವುಡ್‌ನ ಹಲವು ನಟಿಯರಿಗೆ ನೋಟಿಸ್‌ ಸಾಧ್ಯತೆ

ಬೆಂಗಳೂರಿನಲ್ಲಿ ಡ್ರಗ್ಸ್‌ ಜಾಲದ ಮೇಲೆ ದಾಳಿ ನಡೆಸಿದ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋ ಅಧಿಕಾರಿಗಳು , ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ಅನೇಕ ನಟಿಯರಿಗೆ ನೋಟಿಸ ನೀಡುವ ಸಾಧ್ಯತೆ ಇದೆ.

ಕಲ್ಯಾಣ್‌ ನಗರದ ಅಪಾರ್ಟ್‌ಮೆಂಟ್‌ಮೊಂದಕ್ಕೆ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು, ಅನಿಕಾ ಹಾಗೂ ಅನೂಪ್‌ ಮತ್ತು ರಾಜೇಶ್‌ನನ್ನು ಬಂಧಿಸಿದ್ದರು, ವಿಚಾರಣೆ ವೇಳೆ ಆರೋಪಿಗಳು ಸ್ಯಾಂಡಲ್‌ವುಡ್‌ನ ನಟ ನಟಿಯರು ಹಾಗೂ ಸಂಗೀತ ನಿರ್ದೇಶಕರು ಡ್ರಗ್ಸ್‌ ಖರೀದಿಸುತ್ತಿದ್ದರು ಎಂದು ಹೇಳಿದ್ದಾರೆ.

ಇನ್ನು ನಟರಿಗಿಂತ ಹೆಚ್ಚಾಗಿ ನಟಿಯರೇ ಡ್ರಗ್ಸ್‌ ಕಸ್ಟಮರ್‌ಗಳು ಎಂಬ ಸ್ಫೋಟಕ ಹೇಳಿಕೆಯನ್ನು ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಅನೇಕ ನಟಿಯರ ಹೆಸರನ್ನು ಬಾಯ್ಬಿಟ್ಟಿದ್ದಾನೆ ಅಂತಾನೂ ಹೇಳಲಾಗುತ್ತಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನ ಕೆಲವು ನಟಿಯರನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top