ಡ್ರಗ್ಸ್‌ ಜಾಲದಲ್ಲಿ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಹೆಸರು..

ದಿನೇ ದಿನೇ ಬಗೆದಷ್ಟು ಡ್ರಗ್ಸ್‌ ಜಾಲದಲ್ಲಿ ಸೆಲೆಬ್ರೆಟಿಗಳ ಹೆಸರು ಕೇಳಿ ಬರ್ತಾ ಇದೆ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಎಲ್ಲಾ ಕಲಾವಿದರು ಒಂದು ರೀತಿಯಲ್ಲಿ ನಡುಕ ಶುರುವಾಗಿದ್ದು, ಇದೀಗ ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆಗೂ ಡ್ರಗ್ಸ್‌ ನಶೆಯಲ್ಲಿ ಹೆಸರು ಕೇಳಿ ಬರ್ತಾ ಇದೆ. ಈ ಸಂಬಂಧ ಎನ್‌ಸಿಬಿ ದೀಪಿಕಾಗೆ ಸಮನ್ಸ್‌ ನೀಡುವ ಸಾಧ್ಯತೆ ಇದೆ.

ಖಾಸಗಿ ವಾಹಿನಿಯೊಂದು ವರದಿ ಈ ವಿಚಾರವಾಗಿ ವರದಿ ಮಾಡಿದ್ದು ದೀಪಿಕಾ ಡ್ರಗ್ಸ್‌ ಖರೀದಿಗಾಗಿ ನಡೆಸಿದ್ದಾರೆ ಎನ್ನಲಾಗಿರುವ ವಾಟ್ಸಾಪ್‌ ಚಾಟ್‌ಗಳ ಸ್ಕ್ರೀನ್‌ ಶಾಟ್‌ಗಳು ರಿವೀಲ್‌ ಆಗಿವೆ. ಸದ್ಯ ಡಿ ಮತ್ತು ಕೆ ಎಂಬ ಕೋಡ್‌ ವರ್ಡ್‌ಗಳನ್ನು ಬಳಕೆ ಮಾಡಲಾಗಿದೆ ಡಿ ಅಂದ್ರೆ ದಿಫೀಕಾ ಮತ್ತು ಕೆ ಅಂದ್ರೆ ಕರೀಷ್ಮಾ ಎಂದು ಖಾಸಗಿ ವಾಹಿಸಿ ತಿಳಿಸಿದೆ. ಇನ್ನು ಈ ವಾಟ್ಸಾಪ್‌ ಚಾಟ್‌ನಲ್ಲಿ ಅಮಿತ್‌ ಮತ್ತು ಶಾಲ್‌ ಎಂಬ ಹೆಸರುಗಳು ಸಹ ರಿವೀಲ್‌ ಆಗಿದ್ದು ಇವರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಇನ್ನು ಚಾಟ್‌ ರಿವೀಲ್‌ ಬಳಿಕ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top