ಡಿಸೆಂಬರ್ 19 ಟೀಂ ಇಂಡಿಯಾದಲ್ಲಿ ನಡೀತು ಆ ಎರಡು ಘಟನೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋಲನ್ನು ಕಂಡಿತು,ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಮಾರಕ ದಾಳಿ ನೀಡಿದ ಕ್ರಿಕೆಟ್ ಪ್ರೇಮಿಗಳು ತಂಡ ಗೆಲ್ಲೋದು ಪಕ್ಕಾ ಅಂತಾನೇ ಹೇಳ್ತಿದ್ರು,ಆದ್ರೆ ಎರಡನೇ ಇನ್ನಿಂಗ್ಸ್ ನಲ್ಲಿ ಆಗಿದ್ದೇ ಬೇರೆ,ಆಸ್ಟ್ರೇಲಿಯಾ ಬೌಲರ್ ಗಳ ಕರಾರುವಕ್ಕಾದ ದಾಳಿಗೆ ಟೀಂ ಇಂಡಿಯಾ ಆಟಗಾರರು ತರಗೆಲೆಗಳಂತೆ ಉದುರಲು ಶುರುವಾದ್ರು,ಒಂದು ಟೆಸ್ಟ್ ಪಂದ್ಯದಲ್ಲಿ ಯಾರಿಗೂ ಬೇಡವಾದ ದಾಖಲೆ ಮಾಡೋ ಮೂಲಕ ಇದೀಗ ಟೀಕೆಗೆ ಗುರಿಯಾಗಿದ್ದಾರೆ.ಹೌದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಹುಡುಗರ ಒಂದು ಇ‌ನ್ನಿಂಗ್ಸ್ ನಲ್ಲಿ 36ರನ್ ಗಳಿಸಿ ಡಿಕ್ಲೇರ್ ಮಾಡುವ ಮೂಲಕ ಒಂದು ಇನ್ನಿಂಗ್ಸ್ ನಲ್ಲಿ ಅತೀ ಕಡಿಮೆ ರನ್ ದಾಖಲಿಸಿದ ತಂಡವಾದ್ರು,ಆದ್ರೆ ಕಾಕತಾಳೀಯ ಅಂದ್ರೆ ಟೀಂ ಇಂಡಿಯಾ ಡಿಸೆಂಬರ್ 19 2020 ರಂದು ಯಾರಿಗೂ ಬೇಡವಾದ ದಾಖಲೆಯ‌ನ್ನು ಮಾಡಿದ್ರೆ,ಇದೇ ಡಿಸೆಂಬರ್ 19 2016ರಲ್ಲಿ ಇಂಗ್ಲೆಂಡ್ ಭಾರತ ಪ್ರವಾಸದಲ್ಲಿ 5ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 759ರನ್ ಬಾರಿಸಿ ಟೆಸ್ಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿ ವಿಶ್ವ ದಾಖಲೆ ಬರೆದಿತ್ತು,ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ 75ರನ್ ಗಳ ಇನ್ನಿಂಗ್ಸ್ ಜಯಗಳಿಸಿತ್ತು. ಇದೀಗ ಕಾಕತಾಳೀಯ ಎಂಬಂತೆ ಡಿಸೆಂಬರ್ 19 ಒಂದು ಬೇಡವಾದ ದಾಖಲೆ ಮತ್ತು ಒಂದು ಇಡೀ ಕ್ರಿಕೆಟ್ ಪ್ರಿಯರು ಮೆಚ್ಚುವಂತಹ ದಾಖಲೆಯನ್ನು ಟೀಂ ಇಂಡಿಯಾ ಮಾಡುವ ಮೂಲಕ‌ ಇತಿಹಾಸ ನಿರ್ಮಿಸಿದೆ..

ಇನ್ನು ಇನ್ನೊಂದು ವಿಶೇಷವೇನೆಂದ್ರೆ ಟೀಂ ಇಂಡಿಯಾ ಟೆಸ್ಟ್ ನಲ್ಲಿ ಮಾಡಿರೋ ಕಡೆಮೆ ಸ್ಕೋರ್ ದಾಖಲೆ ಮತ್ತು ಅತಿ ಹೆಚ್ಚ ಸ್ಕೋರ್ ದಾಖಲೆ ಇವೆರಡು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇದ್ರೆ, ಆರ್ ಸಿ ಬಿಯಲ್ಲೂ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಇದೇ ದಾಖಲೆ ಇದೆ. ಆರ್ ಸಿ ಬಿ ಕೂಡ ಐಪಿಎಲ್ ನಲ್ಲಿ ಕಡಿಮೆ ರನ್ ದಾಖಲೆ ಮತ್ತು ಅತಿ ಹೆಚ್ಚುರನ್ ದಾಖಲೆ ಈಗಲೂ ಆರ್ ಸಿ ಬಿ ಹೆಸರಿನಲ್ಲೇ ಇದೆ….

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top