ಡಿಂಪಲ್ ಕ್ವೀನ್ ಜಾಗಕ್ಕೆ ಈಗ ಶಾನ್ವಿ ಎಂಟ್ರಿ

ಕಸ್ತೂರಿ ನಿವಾಸ ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಸುದ್ದಿಯಲ್ಲಿರೋ ಟೈಟಲ್, ಈ ಟೈಟಲ್‍ನಲ್ಲಿ ಸಿನಿಮಾ ಬರ್ತಾ ಇದೆ ಅಂದಾಗ ಅಣ್ಣಾವ್ರ ಅಭಿಮಾನಿಗಳು ಕಸ್ತೂರಿ ನಿವಾಸ ಟೈಟಲ್ ಏನಿದ್ರು ಅಣ್ಣಾವ್ರಿಗೆ ಮಾತ್ರ ಎಂದು ವಿರೋಧಿಸಿದ್ದರಿಂದ ಗೌರವದಿಂದ ಕಸ್ತೂರಿ ನಿವಾಸ' ಟೈಟಲ್ ಅನ್ನು ಕಸ್ತೂರಿ ಮಹಲ್’ ಬದಲಾಯಿಸಿಲಾಯ್ತು, ಇನ್ನು ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಎಂದು ಹೇಳಲಾಗಿತ್ತು, ಆದ್ರೆ ಟೇಟ್ಸ್ ಹೊಂದಿಕೆಯಾಗದ ಕಾರಣ ರಚಿತಾ ರಾಮ್ ಈ ಚಿತ್ರದಿಂದ ಹೊರ ಬಂದಿದ್ರು, ದಿನೇಶ್ ಬಾಬು ನಿರ್ದೇಶನದ 50 ನೇ ಚಿತ್ರದಿಂದ ರಚಿತಾ ರಾಮ್ ಹೊಸ ಬಂದಿದ್ದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತ್ತು. ಇದೀಗ ರಚಿತಾ ರಾಮ್ ಜಾಗಕ್ಕೆ ಹೊಸ ನಾಯಕಿ ಎಂಟ್ರಿಯಾಗಿದ್ದು, ಆ ಜಾಗಕ್ಕೆ ಇದೀಗ ಶಾನ್ವಿ ಶ್ರೀವಾಸ್ತವ್ ಎಂಟ್ರಿಕೊಟ್ಟಿದ್ದಾರೆ. ಆ ಮೂಲಕ ಕಸ್ತೂರಿ ಮಹಲ್‍ಗೆ ಶಾನ್ವಿ ಶ್ರೀವಾಸ್ತವ್ ಒಡತಿಯಾಗಿದ್ದಾರೆ. ಅಕ್ಟೋಬರ್ 5ರಿಂದ ಚಿಕ್ಕಮಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದ್ದು, ಶಾನ್ವಿ ಶ್ರೀವತ್ಸ ಅಕ್ಟೋಬರ್‍ನಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top