ಡಾಲಿ ಧನಂಜಯ್ ಇನ್ಮೇಲೆ ಡಾನ್ ಜಯರಾಜ್…!

ಡಾಲಿ ಧನಂಜಯ್ 2020ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಇರೋ ನಟ..ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿ ಇರೋ ಧನಂಜಯ್ ‘ಪಾಪ್ ಕಾರ್ನ್ ಮಂಕಿ ಟೈಗರ್ ‘ ಚಿತ್ರ ಈ ವಾರ ತೆರೆಕಾಣೋಕೆ ರೆಡಿಯಾಗಿದೆ… ಹೀಗಿರುವಾಗ್ಲೇ ಡಾಲಿ ಧನಂಜಯ್ ಈಗ ಪ್ಯಾನ್ ಇಂಡಿಯಾದಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ…

ಹೌದು ಈಗಾಗ್ಲೇ ‘ಅಲ್ಲಮ್ಮ’ ಚಿತ್ರದ ಮೂಲಕ ಬಯೋಪಿಕ್ ಸಿನಿಮಾ‌ ಮಾಡಿದ್ದ ಡಾಲಿ,ಈಗ ಮತ್ತೊಬ್ಬನ ಬಯೋಪಿಕ್ ಚಿತ್ರಕ್ಕೆ ರೆಡಿಯಾಗ್ತಿದ್ದಾರೆ..

ಒಂದು ಕಾಲದಲ್ಲಿ , ಬೆಂಗಳೂರಿನಲ್ಲಿ ಡಾನ್ ಆಗಿ ಮೆರೆದಿದ್ದ,ಜಯರಾಜ್ ಜೀವನಾಧಾರಿತ ಚಿತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.ಇನ್ನು ಈ ಚಿತ್ರವನ್ನು ಎರಡು ಭಾಗದಲ್ಲಿ ತೆರೆಮೇಲೆ ತರೋ ಪ್ಲಾನ್ ಮಾಡಿದ್ದು ,ಚಿತ್ರ ಸದ್ಯದರಲ್ಲೇ ಸೆಟ್ಟೇರಲಿದೆ.

.ಇನ್ನು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಕಥೆ ಇದ್ರೆ,ಅಶುಬೇದ್ರ ನಿರ್ಮಾಣದಲ್ಲಿ ಹೊಸ ಪ್ರತಿಭೆ ಶೂನ್ಯ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ.ಇಂದು ಕೆಸಿಎನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ರಿಂದ ಅಧಿಕೃತವಾಗಿ ಘೋಷಿಸಿದ್ದಾರೆ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top