ಟ್ವಿಟರ್​ನಲ್ಲಿ ಸುದೀಪ್ ಫಾಲೋ ಮಾಡ್ತಿರೋ ಕನ್ನಡದ ಸ್ಟಾರ್​ ಯಾರು ಗೊತ್ತಾ.?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ರು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳು. ಇಬ್ರಿಯಲ್ಲಿ ಯಾರೂ ಕಮ್ಮಿ ಇಲ್ಲ. ಇಬ್ರೂ ಸ್ಯಾಂಡಲ್​ವುಡ್​ನ ಕಣ್ಮಣಿಗಳು.
ಒಂದು ಟೈಮ್​ನಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಕಿಚ್ಚ ಮತ್ತು ದಚ್ಚು ಇದಕ್ಕಿದ್ದಂತೆ ದೂರ ಆಗಿದ್ದಾರೆ. ಆದ್ರೆ ಒಂದಲ್ಲ ಒಂದು ದಿನ ಮತ್ತೆ ಒಂದಾಗೇ ಒಂದಾಗ್ತಾರೆ. ಇಬ್ಬರು ಒಟ್ಟಿಗೇ ಸಿನಿಮಾ ಮಾಡ್ಬೇಕು ಅನ್ನೋದು ಅಭಿಮಾನಿಗಳ ಆಶಯ.. ಅದು ಕೂಡ ನೆರವೇಲಿ ಎನ್ನುವುದು ನಮ್ಮ ಹಾರೈಕೆ ಕೂಡ.

ದರ್ಶನ್ ಮತ್ತು ಸುದೀಪ್ ಇಬ್ಬರೂ ಟ್ವಿಟರ್​ನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಸುದೀಪ್ 65 ಮಂದಿಯನ್ನು ಫಾಲೋ ಮಾಡ್ತಿದ್ದಾರೆ. ಅದರಲ್ಲಿ ಕನ್ನಡದ ಒಬ್ಬರೇ ಒಬ್ಬ ಸ್ಟಾರ್ ನಟ ಅಂದ್ರೆ ಅದು ದರ್ಶನ್ ತೂಗದೀಪ್. ಇನ್ನುಳಿದಂತೆ ಕಿಚ್ಚ ಡೈರೆಕ್ಟರ್ ಕೃಷ್ಣ ಅವರನ್ನು ಹೊರತು ಪಡಿಸಿದರೆ ಸಲ್ಮಾನ್ ಖಾನ್, ರಾಮ್​ಗೋಪಾಲ್ ವರ್ಮಾ, ವಿವೇಕ್ ಓಬಿರಾಯ್, ಶಾರುಖ್ ಖಾನ್​ರನ್ನು ಫಾಲೋ ಮಾಡ್ತಿದ್ದಾರೆ. ಇನ್ನುಳಿದವುಗಳಲ್ಲಿ ಬಹುತೇಕ ತಮ್ಮ ಫ್ಯಾನ್ಸ್ ಫೇಜ್ ಗಳೇ.

Read : ಪೈಲ್ವಾನ್​ ನಂತಾ ಸಿನಿಮಾ ಮಾಡಲ್ಲ ಎಂದಿದ್ದೇಕೆ ಸುದೀಪ್..?!
ಸುದೀಪ್ ದರ್ಶನ್ ಅವರನ್ನು ಫಾಲೋ ಮಾಡ್ತಿದ್ದಾರೆ. ಆದರೆ ದರ್ಶನ್ ಮಾತ್ರ ಸುದೀಪರನ್ನು ಫಾಲೋ ಮಾಡ್ತಿಲ್ಲ…! ರೋರಿಂಗ್ ಸ್ಟಾರ್ ಶ್ರೀಮುರಳಿ, ಸೃಜನ್ ಲೋಕೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಚಿರಂಜೀವಿ ಸರ್ಜಾ, ನವೀನ್ ಕೃಷ್ಣ, ಸುಮಲತಾ ಅಂಬರೀಶ್ , ಅಮೂಲ್ಯ ಮತ್ತಿತರರನ್ನು ಫಾಲೋ ಮಾಡ್ತಿದ್ದಾರೆ. ಫ್ಯಾನ್ಸ್ ಪೇಜ್​ಗಳು ಸೇರಿದಂತೆ 46 ಮಂದಿಯನ್ನು ದರ್ಶನ್ ಫಾಲೋ ಮಾಡ್ತಿದ್ದಾರೆ. ಆದರೆ ಸುದೀಪರನ್ನು ದಚ್ಚು ಫಾಲೋ ಮಾಡ್ತಿಲ್ಲ..!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top