ಟ್ರಾಫಿಕ್ ಪೊಲೀಸ್ ಹೇಳಿದ ದಂಡದ ಮೊತ್ತ ಕೇಳಿ ಬೈಕನ್ನೇ ಸುಟ್ಟ ಭೂಪ..!

ವಾಹನ ಸಂಚಾರ ನಿಯಮ ಹೊಸ ಕಾಯ್ದೆ ಮೇಲೆ ಪ್ರತಿದಿನ ಒಂದೊಂದು ಘಟನೆಗಳ ಬಗ್ಗೆ ವರದಿಯಾಗುತ್ತಲೇ ಇದೆ, ಒಂದು ಕಡೆ ದೊಡ್ಡ ಮೊತ್ತದ ದಂಡ ಕಟ್ಟಲಾಗದೇ ತಲೆ ಮೇಲೆ ಕೈ ಹೊತ್ತು ಕುತ್ತಿದ್ದರೆ, ಇ‌ನ್ನು ಕೆಲವ್ರು ದಂಡ ಕಟ್ಟುವ ಬದಲಿಗೆ ವಾಹನವನ್ನೇ ಪೊಲೀಸರ ಬಳಿ ಬಿಟ್ಟು ಹೋಗುತ್ತಿದ್ದಾರೆ, ಆದ್ರೆ ದೆಹಲಿಯಲ್ಲಿ ರಾಕೇಶ್ ಎಂವ ವ್ಯಕ್ತಿ ದಂಡದ ಮೊತ್ತ ಕೇಳಿ ಬೈಕನ್ನೇ ಸುಟ್ಟ ಘಟನೆ ನಡೆದಿದೆ. ದೆಹಲಿ ನಿವಾಸಿ ರಾಕೇಶ್ ಗಾಡಿ ಓಡಿಸಿಕೊಂಡು ಬರುವಾಗ ಪೊಲೀಸರು ತಪಾಸಣೆ ನಡೆಸಿದಾಗ ರಾಕೇಶ್ ಕುಡಿದಿರುವುದು ಗೊತ್ತಾಗಿದ್ದು ಪೊಲೀಸರು ತಕ್ಷಣ 10000ರೂ ದಂಡವನ್ನು ವಿಧಿಸಿ ರಶೀದಿ ಕೊಟ್ಟಿದ್ದಾರೆ. ಮೊದಲೇ ಪೊಲೀಸರು ತಡೆದು ನಿಲ್ಲಿಸಿದಕ್ಕೆ ಸಿಟ್ಟಾಗಿದ್ದ ರಾಕೇಶ್ ಕುಡಿದ ಮತ್ತಿನಲ್ಲಿ ಕೋಪಗೊಂಡು ತನ್ನ ಗಾಡಿಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರು ಮಾಲ್ವಿಯಾ ಪೊಲೀಸ್ ಠಾಣೆಗೆ ಕರೆಮಾಡಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡು ರಾಕೇಶ್ ಅನ್ನು ವಶಕ್ಕೆ ಪಡೆದಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ರಾಕೇಶ್ ಬೆಂಕಿ ಹಚ್ಚಿದಕ್ಕಾಗಿ 10000ದಂಡದ ಜೊತೆ ಹೆಚ್ಚುವರಿ ದಂಡ ಕಟ್ಟಬೇಕಾಗಿದೆ.ಅಲ್ಲದೇ ಅಪರಾಧ ಎಸಗಿರುವ ಕಾರಣಕ್ಕಾಗಿ ಪ್ರಕರಣ ಕೂಡ ದಾಖಲಾಗಿದ್ದು ಈಗ ರಾಕೇಶ್ ಕೋರ್ಟ್ ಹೇಳಿದಷ್ಟು ದಂಡ ಕಟ್ಟಬೇಕಾಗಿದೆ,ಒಟ್ಟಿನಲ್ಲಿ ಕೋಪದಿಂದ ಮಾಡಿದ ಯಡವಟ್ಟಿಗೆ ಹಣವೂ ಹೋಯ್ತು ಗಾಡಿಯೂ ಬೆಂಕಿಯಲ್ಲಿ ಸುಟ್ಟು ಕರಕಲಾಯಿತು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top