ಟೆಸ್ಟ್‌ ಸರಣಿಗೂ ಮುನ್ನವೇ ಸಿಹಿ ಸುದ್ದಿ ನೀಡಲಿದ್ದಾರಾ ವಿರಾಟ್‌ ಕೊಹ್ಲಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಟೀಂ ಇಂಡಿಯಾ ಏಕದಿನ ಸರಣಿ ಸೋತು, ಟಿ 20 ಸರಣಿಯಲ್ಲಿ ಗೆದ್ದು ಬೀಗಿದೆ. ಇದೀಗ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಬಾರಿ ಟೆಸ್ಟ್‌ ಸರಣಿ ತುಂಬಾ ಕುತೂಹಲಕಾರಿಯಾಗಿದ್ದು, ಕಳೆದ ವರ್ಷ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗೆದ್ದು ಬೀಗಿತ್ತು. ಈ ಬಾರಿಯು ಅದೇ ಉತ್ಸಾಹದಲ್ಲಿರೋ ಟೀಂ ಇಂಡಿಯಾಗೆ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್‌ ಗವಾಸ್ಕರ್‌ ಟೀಂ ಇಂಡಿಯಾ ಟೆಸ್ಟ್‌ ಸರಣಿ ಗೆಲ್ಲೋ ಕನಸು ಕಾಣ್ತಿದೆ ಆದ್ರೆ ಸರಣಿ ಗೆಲ್ಲುವುದು ಅಷ್ಟು ಸುಲಭವಲ್ಲ, ಅದಕ್ಕಾಗಿ ಕಠಿಣ ಶ್ರಮವನ್ನು ಹಾಕಬೇಕು. ಬಿಗ್‌ ಟಾರ್ಗೆಟ್‌ ಅನಿವಾರ್ಯ ಹೀಗಾಗಿ ಭಾರತ ಅತೀ ಹೆಚ್ಚು ಸ್ಕೋರ್‌ ಮಾಡುವ ಕಡೆ ಹೆಚ್ಚು ಗಮನವನ್ನು ನೀಡಬೇಕು ಎಂದು ಸುನೀಲ್‌ ಗವಾಸ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಟೆಸ್ಟ್‌ ಸರಣಿಗಾಗಿ ವಿರಾಟ್‌ ಕೊಹ್ಲಿ ತನ್ನಲ್ಲಿರುವ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ನಾಲ್ಕು ಟೆಸ್ಟ್‌ ಸರಣಿ ಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಟೆಸ್ಟ್‌ ಪಂದ್ಯವನ್ನು ಮಾತ್ರ ಆಡುತ್ತಿದ್ದು, ಉಳಿದ ಟೆಸ್ಟ್‌ ಪಂದ್ಯಕ್ಕೆ ಈಗಾಗಲೇ ಬಿಸಿಸಿಐ ನಿಂದ ರಜೆಯನ್ನು ಮಂಜೂರು ಮಾಡಿಕೊಂಡಿದ್ದಾರೆ. ಜನವರಿಯಲ್ಲಿ ವಿರಾಟ್‌ ಕೊಹ್ಲಿ ತಂದೆಯಾಗಲಿದ್ದು, ಹೀಗಾಗಿ ತಾವು ಪತ್ನಿ ಅನುಷ್ಕಾ ಅವರನ್ನು ಸೇರಿಕೊಳ್ಳುವ ನಿಟ್ಟಿನಲ್ಲಿ ರಜೆಯನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್‌ 17ರಿಂದ ಆರಂಭವಾಗಲಿರೋ ಟೆಸ್ಟ್‌ ಸರಣಿ ಬಗ್ಗೆ ಮಾತನಾಡಿರೋ ವಿರಾಟ್‌ ಕೊಹ್ಲಿ ಕಳೆದ ವರ್ಷಕ್ಕಿಂತಲೂ ಈ ವರ್ಷ ಬಲಿಷ್ಠ ತಂಡ ನಮ್ಮಲ್ಲಿದೆ ಎಂದು ನನಗೆ ಭರವಸೆಯಿದೆ, ನಾಳೆ ನಾನು ಟೆಸ್ಟ್‌ ಸರಣಿ ಆಡುತ್ತೇನೋ ನೋಡುತ್ತೇನೆ. ಟೆಸ್ಟ್‌ ಪಂದ್ಯ ಆಡಿ ನಿಲ್ಲಿಸೋದು ನನಗೆ ವಿಚಾರವಲ್ಲ. ನಾನು ಪೂರ್ತಿ ಸರಣಿಯನ್ನು ಆಡಲು ಬಯಸಿದ್ದೇನೆ. ನನ್ನ ಫಿಸಿಯೋ ಜೊತೆ ಮಾತನಾಡಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಟೆಸ್ಟ್‌ ಸರಣಿ ಬಗ್ಗೆ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಟೆಸ್ಟ್‌ ಸರಣಿ ಆರಂಭಕ್ಕೂ ಮೊದಲೇ ಟೀಂ ಇಂಡಿಯಾಗೆ ಕೊಂಚ ರಿಲೀಫ್‌ ಸಿಕ್ಕಿದೆ. ಹೌದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾಗೆ ಡೇವಿಡ್‌ ವಾರ್ನರ್‌ ಮತ್ತು ಸ್ಟೀವ್‌ ಸ್ಮಿತ್‌ ಹೆಚ್ಚಾಗಿ ಕಾಡಲಿದ್ದು, ಇದೀಗ ಮೊದಲ ಟೆಸ್ಟ್‌ ಪಂದ್ಯಕ್ಕೆ ಡೇವಿಡ್‌ ವಾರ್ನರ್‌ ಅಲಭ್ಯರಾಗಿದ್ದಾರೆ. ಎರಡನೇ ಏಕದಿನ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಸರಣಿಯಿಂದ ಹೊರಗುಳಿದಿದ್ದ ವಾರ್ನರ್‌ ಇದೀಗ ಮೊದಲ ಟೆಸ್ಟ್‌ ಪಂದ್ಯದಿಂದಲೂ ಹೊರಗುಳಿಯಲಿದ್ದು, ಎರಡನೇ ಟೆಸ್ಟ್‌ ಪಂದ್ಯಕ್ಕೆ ಲಭ್ಯವರಾಗುವ ಲಕ್ಷಣಗಳಿವೆ. ಈ ಬಗ್ಗೆ ಮಾತನಾಡಿರೋ ವಾರ್ನರ್‌ ಅತೀ ಕಡಿಮೆ ಅವಧಿಯಲ್ಲಿ ನಾನು ಚೇತಿರಿಸಿಕೊಳ್ಳುತ್ತಿದ್ದೇನೆ, ಈ ಬಗ್ಗೆ ನನಗೆ ಖುಷಿಯಿದೆ. ಸಿಡ್ನಿಯಲ್ಲೇ ಉಳಿದು ಸಂಪೂರ್ಣ ಫಿಟ್‌ ಆಗಿ ಮರಳಲು ಪ್ರಯತ್ನಿಸುತ್ತಿದ್ದೇನೆ. ಎಂದು ವಾರ್ನರ್‌ ಹೇಳಿದ್ದಾರೆ.

ನಿಮ್ಮ ಪ್ರಕಾರ ಟೀಂ ಇಂಡಿಯಾ ಕಳೆದ ಬಾರಿ ಟೆಸ್ಟ್‌ ಸರಣಿಯಲ್ಲಿ ಪ್ರದರ್ಶನ ತೋರಿದ ರೀತಿ ಈ ಬಾರಿಯು ತೋರಿ ಸರಣಿಯಲ್ಲಿ ವಶಪಡಿಸಿಕೊಳ್ಳಲಿದ್ಯಾ 11ರ ಬಳಗದಲ್ಲಿ ಯಾವ ಆಟಗಾರರನ್ನು ನೋಡಲು ಇಷ್ಟ ಪಡುತ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top