ಟೀ ಮಾರಿ 40 ವಿದ್ಯಾರ್ಥಿಗಳಿಗೆ ಆಸರೆಯಾದ ವ್ಯಾಪಾರಿ..!

ಸಹಾಯ ಮಾಡೋ ಮನಸ್ಸು ಇದ್ರೆ..ಯಾವ ರೀತಿಯಲ್ಲಿ..ಯಾವ ಪರಿಸ್ಥಿತಿ ಇದ್ರು.ಎಂತವರಿಗೂ ಸಹಾಯ ಮಾಡಬಹುದು ಅನ್ನೊದಕ್ಕೆ ಇಲ್ಲೊಂದು ಬೆಸ್ಟ್‌ ಎಕ್ಸಾಂಪಲ್‌ ಇದೆ..ಹೌದು ಟೀ ಮಾರಿ 40 ವಿದ್ಯಾರ್ಥಿಗಳಿಗೆ ದಾರಿದೀಪವಾಗಿರೋ ವ್ಯಕ್ತಿಯ ಹೆಸರು ಮೊಹಮದ್‌ ಮೆಹಬೂಬ್‌ ಮಲಿಕ್‌..ಸುಮಾರು ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಹಾ ವ್ಯಾಪಾರ ಮಾಡುವ ಮಲಿಕ್‌.ಚಹಾ ಮಾರಿ ಬಂದ ಲಾಭದಲ್ಲಿ ಶೇ 80ರಷ್ಟು ಹಣವನ್ನು 40 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತಿದ್ದಾರೆ.

ಬಡ ಕುಟುಂಬದಲ್ಲಿ ಬೆಳೆದ ಮಲಿಕ್‌ ಪ್ರೌಢಶಾಲೆಯಾದ ನಂತರ ಮುಂದೆ ಓದಲು ಆಗಲಿಲ್ಲವಂತೆ. ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲದಿದ್ದರಿಂದ ವಿಧ್ಯಾಭ್ಯಾಸವನ್ನು ಅರ್ಧದಲ್ಲಿಯೇ ಬಿಡಬೇಕಾಯಿತಂತೆ, ಹಾಗಾಗಿ ಯಾರಾದ್ರೂ ಶಿಕ್ಷಣದಿಂದ ವಂಚಿತರಾಗಿ ಕೆಲ ಮಕ್ಕಳು ಕೆಲಸಕ್ಕೆ ಹೋಗುವುದನ್ನು ನೋಡಿದರೆ ಅವರನ್ನು ನೋಡಿ ಸುಮ್ಮನೆ ಇರಲು ಸಾಧ್ಯವಾಗುವುದಿಲ್ಲ, ಹಾಗಾಗಿ ಅವರನ್ನು ಶಾಲೆಗೆ ಸೇರಿಸಿ ಅವರಿಗೆ ಶಿಕ್ಷಣ ಕೊಡಿಸುವ ಮೂಲಕ, ಅದರಲ್ಲಿ ಖುಷಿಯನ್ನು ಪಡುತ್ತಿದ್ದೇನೆ ಎಂದು ಮಲಿಕ್‌ ಹೇಳಿಕೊಂಡಿದ್ದಾರೆ.

ಇನ್ನು 2017ರಲ್ಲಿ ʻಮಾ ತುಜೆ ಸಲಾಂʼ ಅನ್ನೋ ಎನ್‌ಜಿಓ ಆರಂಭಿಸಿ,ಚಹಾ ಮಾರಾಟ ಮಾಡಿ ಬರುವ ಲಾಭದ ಶೇ.80ರಷ್ಟು ಹಣವನ್ನು ನಾನು 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸಲು ಖರ್ಚು ಮಾಡುತ್ತಿದ್ದೇನೆ.ಮಕ್ಕಳಿಗಾಗಿ ತಿಂಗಳಿಗೆ ಸುಮಾರು 20 ಸಾವಿರ ಹಣ ಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಈ ವಿಚಾರ ತಿಳಿದ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದು, ಒಂದು ಚಿಕ್ಕ ಚಹಾದ ಅಂಗಡಿ ಇಟ್ಟುಕೊಂಡು ಅದರಿಂದ ಬರುವ ಶೇ.80ರಷ್ಟು ಲಾಭವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ ಎಂಥಹ ಪ್ರೇರಣೆ..! ಎಂದು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ ವಿವಿಎಸ್‌ ಲಕ್ಷ್ಮಣ್‌..ಇನ್ನು ವಿಷಯ ತಿಳಿದ ನೆಟ್ಟಿಗರು ಕೂಡ ಮಲಿಕ್‌ ಕಾರ್ಯಕ್ಕೆ ಮನ ಸೋತಿದ್ದು ಮಲಿಕ್‌ ನಿಮಗೊಂದು ಸಲಾಂ ಅಂತ ಹೇಳುತ್ತಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top