ಟೀಂ ಇಂಡಿಯಾ ಸೋಲಿಗೆ ಬೌಲರ್‌ಗಳೇ ಕಾರಣ ಎಂದ ವಿರಾಟ್‌ ಕೊಹ್ಲಿ

ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋಲುವ ಮೂಲಕ ಮೂರು ಏಕದಿನ ಪಂದ್ಯದಲ್ಲಿ 2-0ಯಿಂದ ಸರಣಿಯನ್ನು ಬಿಟ್ಟುಕೊಟ್ಟಿದ್ದು, ಇದೀಗ ಟೀಂ ಇಂಡಿಯಾ ತಂಡ ಸೋಲಲು ಪ್ರಮುಖ ಕಾರಣವೇನು ಅನ್ನೋದ್ರ ಬಗ್ಗೆ ಮಾತನಾಡಿದ್ದಾರೆ. ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 390ರನ್‌ಗಳ ಗುರಿಯನ್ನು ಬೆನ್ನು ಹತ್ತಿದ್ದ ಟೀಂ ಇಂಡಿಯಾ ಹುಡುಗರು 50 ಓವರ್‌ನಲ್ಲಿ 338ರನ್‌ಗಳಿಸಲು ಮಾತ್ರ ಸೀಮಿತವಾಯಿತು, ಆ ಮೂಲಕ ಏಕದಿನ ಸರಣಿಯನ್ನು ಕೈಚೆಲ್ಲಿ ಕುಳಿತುಕೊಂಡಿತು, ಪಂದ್ಯ ಮುಗಿದ ನಂತರ ಮಾತನಾಡಿರೋ ನಾಯಕ ವಿರಾಟ್‌ ಕೊಹ್ಲಿ ತಂಡದ ಹಿನ್ನಡೆಗೆ ಪ್ರಮುಖ ಕಾರಣ ಏನು ಅನ್ನೋದ್ರ ಬಗ್ಗೆ ಮಾತನಾಡಿದ್ದಾರೆ.

ಸೋಲಿನ ಬಳಿಕ ಬೇಸರ ವ್ಯಕ್ತಪಡಿಸಿರೋ ವಿರಾಟ್‌ ಕೊಹ್ಲಿ ಟೀಂ ಇಂಡಿಯಾ ತಂಡಕ್ಕಿಂತ ಮೀರಿದ ಪ್ರದರ್ಶನವನ್ನು ಆಸ್ಟ್ರೇಲಿಯಾ ತಂಡ ನೀಡಿದೆ, ಹಾಗೂ ನಾವು ಮಾಡಿದ ಬೌಲಿಂಗ್‌ ಅಷ್ಟೊಂದು ಪರಿಣಾಮಕಾರಿಯಾಗಿ ಇರಲಿಲ್ಲ, ಅಲ್ಲದೆ ನಾವು ಅಂದು ಕೊಂಡ ಜಾಗದಲ್ಲಿ ಬೌಲ್‌ ಹಾಕುವ ಮೂಲಕ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಪರಿಣಾಮಕಾರಿಯಾಗಲು ಸಾಧ್ಯವಾಗಲಿಲ್ಲ ಅಂತ ಎಂದು ಬೇಸರ ವ್ಯಕ್ತಪಡಿಸಿದ್ದಾಋಎ.

ಇನ್ನು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್‌ ಲೈನಪ್‌ ತುಂಬಾ ಬಲಿಷ್ಠವಾಗಿದೆ, ನಾವೂ ಕೂಡ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತವನ್ನು 340ರ ಆಸುಪಾಸಿಗೆ ತೆಗೆದುಕೊಂಡು ಹೋಗಿದ್ದೇವೆ, ಆಸ್ಟ್ರೇಲಿಯಾ ಬೌಲರ್‌ಗಳು ತಾವೂ ಅಂದುಕೊಂಡಂತೆ ಉತ್ತಮ ಪ್ಲೇಸ್‌ನಲ್ಲೇ ಬೌಲಿಂಗ್‌ ಮಾಡುತ್ತಿದ್ದರು, ಆ ಮೂಲಕ ಅವರಿಗೆ ವಿಕೆಟ್‌ ಪಡೆಯಲು ಅವಕಾಶಗಳು ಸಿಕ್ಕವೂ, ಆದ್ರೆ ನಮ್ಮ ತಂಡದ ಬೌಲರ್‌ಗಳಿಗೆ ಅದು ಸಾಧ್ಯವಾಗಲಿಲ್ಲ ಹಾಗಾಗಿ ಪಂದ್ಯವನ್ನು ಸೋಲಬೇಕಾಯಿತು ಎಂದು ಪಂದ್ಯದ ನಂತರ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣವೇನು , ನಿಮ್ಮ ಅನಿಸಿಕೆ ಏನು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top