ಟೀಂ ಇಂಡಿಯಾದಲ್ಲಿ ಈ ಕನ್ನಡಿಗ ಇದ್ರೆ ಮ್ಯಾಚ್‌ ಗೆಲ್ಲೋದು ಪಕ್ಕಾ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ ೨೦ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡೋ ಮೂಲಕ ಶುಭಾರಂಭ ಮಾಡಿದ್ದು. ಪಂದ್ಯದ ಬಳಿಗ ಇದೀಗ ಒಂದಿಷ್ಟು ಲೆಕ್ಕಾಚಾರಗಳು ಶುರುವಾಗಿದೆ. ಅದೇ ರೀತಿ ಇದೀಗ ಕನ್ನಡಿಗನ ವಿಚಾರದಲ್ಲೂ ಲೆಕ್ಕಾಚಾರಗಳು ಶುರುವಾಗಿದೆ. ಹೌದು ಈ ಕನ್ನಡಿಗ ಆಟಗಾರ ಟೀಂ ಇಂಡಿಯಾದ 11ರ ಬಳಗದಲ್ಲಿ ಇದ್ದರೆ ಆತ ತಂಡಕ್ಕೆ ಲಕ್ಕೀ ಚಾರ್ಮ್‌ ಅಂತ ಹೇಳೋಕೆ ಶುರುಮಾಡಿದ್ದಾರೆ. ಈತ ತಂಡದಲ್ಲಿ ಆಡಿದತರ ತಂಡ ಪಕ್ಕಾ ಗೆಲ್ಲಲಿದೆ ಅನ್ನೋ ಮಾತು ಇದೀಗ ಶುರುವಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಆತ ಆಡಿದ ಸತತ 20 ಟಿ 20 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವನ್ನು ಸಾಧಿಸಿದೆ. ಹೌದು ಅಂತಹ ಲಕ್ಕಿ ಚಾರ್ಮ್‌ ಕನ್ನಡಿಗ ಯಾರು ಅಂದ್ರೆ ಅದು ಬೇರೆ ಯಾರು ಅಲ್ಲ ಮನೀಷ್‌ ಪಾಂಡೆ.

ಚುಟುಕು ಕ್ರಿಕೆಟ್‌ನಲ್ಲಿ ತಮ್ಮದೇ ಆದ ಟ್ಯಾಲೆಂಟ್‌ ಹೊಂದಿರೋ ಮನಿಷ್‌ ಪಾಂಡೆ ತಂಡ ಸಂಕಷ್ಟದಲ್ಲಿ ಇದ್ದಾಗ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸ ಬಲ್ಲ ಆಟಗಾರ ಇದೀಗ ಮನೀಷ್‌ ಪಾಂಡೆ ತಂಡದಲ್ಲಿ ಇದ್ರೆ ಟೀಂ ಇಂಡಿಯಾ ಚುಟುಕು ಪಂದ್ಯಗಳಲ್ಲಿ ಗೆಲ್ಲಲಿದೆ ಅನ್ನೋ ಮಾತು ಶುರುವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮನೀಷ್‌ ಪಾಂಡೆ ಟೀಂ ಇಂಡಿಯಾ ಪರ ಆಡಿದ ಸತತ 20 ಪಂದ್ಯಗಳನ್ನು ತಂಡ ಗೆದ್ದಿರುವುದು ಉದಾಹರಣೆ. ಇನ್ನು ಟೀಂ ಇಂಡಿಯಾ ಗೆದ್ದಿರೋ ಅಷ್ಟ ಪಂದ್ಯದಲ್ಲಿ ಮನೀಷ್‌ ಪಾಂಡೆ ಕೆಲವು ಪ್ರಮುಖ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಮನೀಷ್‌ ಉತ್ತಮ ಪ್ರದರ್ಶನ ತೋರದಿದ್ದರು ತಂಡ ಗೆಲುವನ್ನು ಸಾಧಿಸಿತು. ಆ ಮೂಲಕ ಮನೀಷ್‌ ಒಂದು ರೀತಿಯಲ್ಲಿ ತಂಡಕ್ಕೆ ಲಕ್ಕಿ ಚಾರ್ಮ್‌ ಅಂತ ಕ್ರಿಕೆಟ್‌ ಪ್ರಿಯರು ಹೇಳುತ್ತಿದ್ದಾರೆ.

ಒಂದು ಕಡೆ ಟೀಂ ಇಂಡಿಯಾಗೆ ಸೆಲೆಕ್ಟ್‌ ಆದ್ರು 11ರ ಬಳಗದಲ್ಲಿ ಆಡಲು ಅವಕಾಶ ಸಿಗುತ್ತಿಲ್ಲ ಅನ್ನೋ ಬೇಸರ ಮನಿಷ್‌ ಅಭಿಮಾನಿಗಳಲ್ಲಿ ಇದ್ದರೆ ಇತ್ತ ತಾವು ಆಡಿರೋ ಪಂದ್ಯಗಳಲ್ಲಿ ತಂಡ ಗೆಲುವನ್ನು ಸಾಧಿಸುತ್ತಿದೆ ಅನ್ನೋ ಖಷಿಯಲ್ಲಿ ಕ್ರಿಕೆಟ್‌ ಪ್ರೇಮಿಗಳು ಇದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ ೨೦ ಪಂದ್ಯಕ್ಕೆ ಟೀಂ ಇಂಡಿಯಾಗ ಆಘಾತವಾಗಿದೆ.ಹೌದು ಕಳೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಕೊನೆಯ ಓವರ್‌ನಲ್ಲಿ ಗಾಯಾಳುವಾದ ರವೀಂದ್ರ ಜಡೇಜಾ ಮುಂದಿನ ಉಳಿದ ಟಿ20 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಸ್ಟಾರ್ಕ್‌ ಎಸೆದ ಬೌಲ್‌ ಜಡೇಜಾ ಅವರ ತಲೆಗೆ ಬಡಿದಿದ್ದರ ಪರಿಣಾಮ ಜಡೇಜಾ ನಂತರ ಫಿಲ್ಡಿಂಗ್‌ಗೆ ಇಳಿದಿರಲಿಲ್ಲ, ಜಡೇಜಾ ಬದಲಿಗೆ ಕಣಕ್ಕೆ ಇಳಿದ ಚಾಹಲ್‌ ಜಡೇಜಾ ಬದಲು ಬೌಲಿಂಗ್‌ ಮಾಡಿ ತಂಡದ ಗೆಲುವಿಗೆ ಕಾರಣವಾಗಿದ್ರು, ಇದೀಗ ಜಡೇಜಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ಎರಡು ಟಿ ೨೦ ಪಂದ್ಯಗಳಿಗೆ ಜಡೇಜಾ ಅಲಭ್ಯರಾಗಲಿದ್ದು ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.

ತಂಡಕ್ಕೆ ಇದೀಗ ಭರವಸೆಯ ಎಡಗೈ ಬೌಲರ್‌ ಸಿಕಿದ್ದು ಒಂದು ರೀತಿಯಲ್ಲಿ ಟೀಂ ಇಂಡಿಯಾ ಬೌಲಿಂಗ್‌ ವಿಭಾಗದಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಹೌದು ಪಾದಾರ್ಪಣೆ ಪಂದ್ಯದಲ್ಲಿ ಕಮಾಲ್‌ ಮಾಡಿದ ತಮಿಳುನಾಡಿ ವೇಗಿ ಟಿ ನಟರಾಜನ್‌ ಇದೀಗ ಟೀಂ ಇಂಡಿಯಾದ ಭರವಸೆಯ ಎಡಗೈ ಬೌಲರ್‌ ಆಗಿ ಕಾಣಿಸಿಕೊಂಡಿದ್ದಾರೆ. ಜಾಹೀರ್‌ ಖಾನ್‌ ನಂತರ ತಂಡಕ್ಕೆ ಒಬ್ಬ ಉತ್ತಮ ಎಡಗೈ ಬೌಲರ್‌ನ ಕೊರತೆ ಎದ್ದು ಕಾಣುತ್ತಿತ್ತು, ಆದ್ರೆ ಐಪಿಎಲ್‌ನಲ್ಲಿ ಯಾರ್ಕರ್‌ ಮೂಲಕ ಕಮಾಲ್‌ ಮಾಡಿದ್ದ ಟಿ ನಟರಾಜನ್‌ ಟೀಂ ಇಂಡಿಯಾಗೆ ಸೆಲೆಕ್ಟ್‌ ಆಗಿದ್ರು. ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲಿ ಪಾದಾರ್ಪಣೆ ಮಾಡುವ ಮೂಲಕ ಎರಡು ವಿಕೆಟ್‌ ಕಿತ್ತು ಭರವಸೆ ಮೂಡಿಸಿದ್ದ ನಟರಾಜನ್‌ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ 20 ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಟಿ 20 ಪಂದ್ಯಕ್ಕೂ ಪಾದಾರ್ಪಣೆ ಮಾಡಿದ್ರು.ಕೊಟ್ಟ ಅವಕಾಶವನ್ನು ಸದುಪಯೋ ಪಡಿಸಿಕೊಂಡ ನಟರಾಜನ್‌ ಆಸ್ಟ್ರೇಲಿಯಾ ವಿರುದ್ಧ 4 ಓವರ್‌ನಲ್ಲಿ 30ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ ಪಡೆಯುವ ಮೂಲಕ ಟೀಂ ಇಂಡಿಯಾದಲ್ಲಿ ತಾನೋಬ್ಬ ಉತ್ತಮ ಎಡಗೈ ಬೌಲರ್‌ ಆಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ಟೀಂ ಇಂಡಿಯಾಗೆ ಮನೀಷ್‌ ಪಾಂಡೆ ಲಕ್ಕಿ ಚಾರ್ಮ್‌ ಅಂತ ನಿಮಗೆ ಅನಿಸುತ್ತೆಯಾ, ಮುಂದಿನ ಪಂದ್ಯಗಳಿಗೆ ಜಡೇಜಾ ಅಲಭ್ಯತೆ ತಂಡಕ್ಕೆ ನಷ್ಟವಾಗಲಿದ್ಯ, ಟಿ ನಟರಾಜನ್‌ ಅವರ ಬೌಲಿಂಗ್‌ ಪ್ರದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top