
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಟಿ 20 ಸರಣಿಯನ್ನು ತನ್ನದಾಗಿಸಿಕೊಂಡು ದಾಖಲೆ ಬರೆದಿದೆ.ಇದೀಗ ಐಸಿಸಿ ಟಿ 20 ರ್ಯಾಂಕಿಂಗ್ ಲಿಸ್ಟ್ ಬಿಡುಗಡೆ ಮಾಡಿದ್ದು, ಕನ್ನಡಿಗ ಕೆ ಎಲ್ ರಾಹುಲ್ ನಾಯಕ ವಿರಾಟ್ ಕೊಹ್ಲಿಯವರನ್ನು ಹಿಂದಿಕ್ಕಿದ್ದಾರೆ. ತಂಡದಲ್ಲಿ ಉಪನಾಯಕನಾಗಿ ಮುಂಚುತ್ತಿರೋ ಕೆ ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಟಿ 20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಮೂರು ಪಂದ್ಯಗಳನ್ನು 81ರನ್ ಕಲೆಹಾಕುವ ಮೂಲಕ 816 ಅಂಕಗಳೊಂದಿ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ನಾಯಕ ವಿರಾಟ್ ಕೊಹ್ಲಿ 697 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಆ ಮೂಲಕ ವಿಶ್ವ ಟಿ 20 ಕ್ರಿಕೆಟ್ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಮೂಲಕ ಬೆಸ್ಟ್ ಟಿ 20 ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.
ಕ್ರಿಕೆಟ್ ಮತ್ತೆ ಮರಳಿದ ಸುರೇಶ್ ರೈನಾ
ಕ್ರಿಕೆಟ್ಗೆ ಮತ್ತೆ ಮರಳುತ್ತಿದ್ದಾರೆ ಮಿಸ್ಟರ್ ಐಪಿಎಲ್ ಅಂತಾನೇ ಫೇಮಸ್ ಆಗಿರೋ ಸುರೇಶ್ ರೈನ್ ಹೌದು ಅಂತರಾಷ್ಟ್ರೀಯ ಕ್ರಿಕೆಟ್ಗೆ ಈಗಾಗಲೇ ಗುಡ್ಬೈ ಹೇಳಿರೋ ಸುರೇಶ್ ರೈನಾ 2020ರ ಐಪಿಎಲ್ನಲ್ಲಿ ವೈಯುಕ್ತಿಕ ಕಾರಣಗಳನ್ನು ನೀಡಿ ಐಪಿಎಲ್ನಿಂದ ವಾಪಾಸ್ ಆಗಿದ್ರು, ಆ ನಂತರದಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ಮತ್ತು ಮಾಲ್ಡೀವ್ಸ್ ಕ್ರಿಕೆಟ್ ಬೋರ್ಡ್ ಅಭಿವೃದ್ಧಿ ವಿಚಾರವಾಗಿ ಒಂದಿಷ್ಟು ಕೆಲಸದಲ್ಲಿ ತೊಡಗಿಕೊಂಡಿದ್ರು, ಇದೀಗ ಸುರೇಶ್ ರೈನಾ ಕ್ರಿಕೆಟ್ ಮರಳುವ ಬಗ್ಗೆ ಹೇಳಿಕೊಂಡಿದ್ದು 20 ತಿಂಗಳ ಬಳಿಗೆ ಅವರು ಕ್ರಿಕೆಟ್ಗೆ ಮರಳುತ್ತಿದ್ದಾರೆ. 2021ರಲ್ಲಿ ನಡೆಯಲಿರೋ ದೇಶೀ ಕ್ರಿಕೆಟ್ ಟೂರ್ನಿಯಲ್ಲಿ ಸುರೇಶ್ ರೈನಾ ಪಾಲ್ಗೊಳ್ಳುವ ಬಗ್ಗೆ ಹೇಳಿದ್ದು2021ರ ಜನವರಿಯಲ್ಲಿ ನಡೆಯಲಿರೋ ಸಯ್ಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿಯಲ್ಲಿ ಆಡಲು ಈಗಾಗಲೇ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ತಮ್ಮ ತವರು ರಾಜ್ಯ ಉತ್ತರ ಪ್ರದೇಶ ತಂಡದ ಪರ ಆಡಲು ರೈನಾ ತಯಾರಿ ನಡೆಸುತ್ತಿದ್ದು ಆಮೂಲಕ ಮತ್ತೆ ಕ್ರಿಕೆಟ್ಗೆ ಮರಳಲಿದ್ದಾರೆ. ಇನ್ನು 2021ರಲ್ಲಿ ನಡೆಯಲಿರೋ ಐಪಿಎಲ್ ಟೂರ್ನಿಗೆ ಲಭ್ಯವಿರೋದಾಗಿಯು ಸ್ಪಷ್ಟಪಡಿಸಿದ್ದು. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸುರೇಶ್ ರೈನಾ ಸಾಭೀತು ಪಡಿಸಬೇಕಾಗಿದೆ.
ಟೀಂ ಇಂಡಿಯಾ ಹೀಗೆ ಮಾಡ್ತಿದ್ರೆ ವಿಶ್ವಕಪ್ ಗೆಲ್ಲೋಲ್ಲ
ಟೀಂ ಇಂಡಿಯಾ ಈ ವಿಚಾರದಲ್ಲಿ ತಂಡವನ್ನು ಸರಿಪಡಿಸಿಕೊಳ್ಳಲಿಲ್ಲ ಅಂದ್ರೆ ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲೋದು ಕಷ್ಟ ಎಂದು ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಹೇಳಿದ್ದಾರೆ. ಖಾಸಗಿ ವಾಹಿನಿಯಲ್ಲಿ ಮಾತಾನಾಡಿರೋ ಅವರು ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಆದ್ರೆ ಫೀಲ್ಡಿಂಗ್ ವಿಚಾರದಲ್ಲಿ ತುಂಬಾ ಎಡವುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳದೇ ಹೋದಲ್ಲಿ ಟೀಂ ಇಂಡಿಯಾ ಮುಂದಿನ ಟಿ 20 ವಿಶ್ವಕಪ್ನಲ್ಲಿ ಕಪ್ಗೆಲ್ಲಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಟೀಂ ಇಂಡಿಯಾದಲ್ಲಿ ಯುವ ಬೌಲರ್ಗಳು ಇದ್ದು, ಅವರು ಬೌಲಿಂಗ್ ಮಾಡಿದ ವೇಳೆ ಉಳಿದ ಆಟಗಾರರು ಉತ್ತಮ ಫಿಲ್ಡಿಂಗ್ ಮಾಡದೇ ಕ್ಯಾಚ್ಗಳನ್ನು ಕೈ ಚೆಲ್ಲಿದರೆ ಅವರು ಏನೂ ಹೇಳದೆ ಆಟದಲ್ಲಿ ಏನೂ ಮಾಡಲು ಆಗೋಲ್ಲ ಅಂತ ಮತ್ತೆ ಬೌಲಿಂಗ್ ಮಾಡಲು ಹೋಗುತ್ತಾರೆ, ಆದ್ರೆ ಕ್ಯಾಚ್ ಬಿಡುವುದು ಆಟದ ಭಾಗವಾಗಬಾರದು ಎಂದು ಹೇಳಿದ್ದು, ನಾವು ಫಿಲ್ಡಿಂಗ್ನಲ್ಲಿ ಎಡವಟ್ಟು ಮಾಡಿದ್ರೆ, ಆಗ ಬೌಲಿಂಗ್ ಮಾಡುತ್ತಿದ್ದ ಅಗರ್ಕರ್,ಶ್ರೀನಾಥ್, ಜಾಹೀರ್ ಖಾತ್ ಅವರಂತಹ ಬೌಲರ್ಗಳು ನಮ್ಮನ್ನು ಗುರಾಯಿಸುತ್ತಿದ್ದರು ಆ ಭಯಕ್ಕೆ ನಾವೂ ಅಭ್ಯಾಸದ ವೇಳಿ ಫಿಲ್ಡಿಂಗ್ನತ್ತ ಹೆಚ್ಚು ಗಮನ ಕೊಡುತ್ತಿದ್ದೇವು, ಇದೀಗ ಟೀಂ ಇಂಡಿಯಾ ಹುಡುಗರು ಅದನ್ನು ಮಾಡಬೇಕು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಹಾಗಾದ್ರೆ ಮೊಹಮ್ಮದ್ ಕೈಫ್ ಹೇಳಿದ ರೀತಿ ಟೀಂ ಇಂಡಿಯಾ ಫಿಲ್ಡಿಂಗ್ ವಿಭಾಗದಲ್ಲಿ ವೀಕ್ ಇದೆ ಅಂತ ನಿಮಗೆ ಅನಿಸುತ್ತದೆಯಾ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.