ಟಿಕ್‍ಟಾಕ್ ನೋಡಲು ಬಿಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಎಸ್‍ಎಸ್‍ಎಲ್‍ಸಿ ಹುಡುಗಿ..!

ಟಿಕ್‍ಟಾಕ್ ಸದ್ಯ ಯುವಕ ಯುವತಿಯರಿಗೆ ಹುಚ್ಚು ಹಿಡಿಸಿದ್ರೆ, ದೊಡ್ಡವರ ಪಾಲಿಗೆ ಇದು ತಲೆನೋವಾಗಿದೆ, ಕುಂತ್ರು ಟಿಕ್‍ಟಾಕ್ ನಿಂತ್ರು ಟಿಕ್‍ಟಾಕ್ ಅನ್ನೋ ಹಾಗೆ ಆಗಿದೆ. ಇನ್ನು ಟಿಕ್‍ಟಾಕ್‍ನಿಂದ ಅದೆಷ್ಟೋ ಅನಾಹುತಗಳು ಸಂಭವಿಸಿದ್ದು, ಅನೇಕ ಜನ ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ್ರೂ ಯುವ ಪೀಳಿಗೆ ಮಾತ್ರ ಈ ಟಿಕ್‍ಟಾಕ್ ಗುಂಗಿನಿಂದ ಹೊರಬರುತ್ತಿಲ್ಲ. ಈಗ ಟಿಕ್‍ಟಾಕ್ ನೋಡಲು ಮೊಬೈಲ್ ಕೊಟ್ಟಿಲ್ಲವೆಂದು ಕೋಪಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಹೌದು ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ಪ್ರಿಯಾಂಕಾ ಎಂಬ ಹುಡುಗಿ ಟಿಕ್‍ಟಾಕ್ ನೋಡಲು ಮೊಬೈಲ್ ನೀಡಿಲ್ಲ ಅನ್ನೋ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯಾಂಕ ನಿನ್ನೆ ಸಂಜೆ ಶಾಲೆ ಮುಗಿಸಿ ಮನೆಗೆ ಬಂದ ವೇಳೆ ತಾಯಿಯ ಬಳಿ ಟಿಕ್‍ಟಾಕ್ ನೋಡಲು ಮೊಬೈಲ್ ಕೇಳಿದ್ದಾಳೆ ಈ ವೇಳೆ ತಾಯಿ ಬೇರೆ ಕೆಲಸ ಇಲ್ಲವಾ ಶಾಲೆಯಿಂದ ಬಂದಿದ್ದೀಯಾ ಹೋಗಿ ಓದಿಕೋ ಅಂತ ಹೇಳಿ ತಾಯಿ ದೇವಸ್ಥಾನಕ್ಕೆ ಹೋಗಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಯುವತಿ ತಾಯಿ ದೇವಸ್ಥಾನಕ್ಕೆ ಹೋದ ವೇಳೆ ರೂಂ ಒಳಗೆ ನೇಣಿಗೆ ಶರಣಾಗಿದ್ದಾಳೆ. ಸದ್ಯ ಈ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top