ಟಿಕ್‌ಟಾಕ್‌ ಫ್ರೆಂಡ್‌ ಕಿರುಕುಳಕ್ಕೆ ಕಿರುತರೆ ನಟಿ ಆತ್ಮಹತ್ಯೆಗೆ ಶರಣು..

ಕಿರುತೆರೆ ನಟಿಯೊಬ್ಬಳು ಟಿಕ್‌ಟಾಕ್‌ನಲ್ಲಿ ಫ್ರೆಂಡ್‌ನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ತೆಲಂಗಾಣದಲ್ಲಿ ನಡೆದಿದೆ. ಶ್ರಾವಣಿ ಎಂಬ ಕಿರುತರೆ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ʻಮನಸು ಮಮತʼ ಮತ್ತು ಮೌನರಾಗಂʼ ಎಂಬ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ಇವರ ಆತ್ಮಹತ್ಯೆಯಿಂದಾಗಿ ಕುಟುಂಬಸ್ಥರು ಮತ್ತು ಅಭಿಮಾನಿಗಳಲ್ಲಿ ದುಃಖ ಮನೆಮಾಡಿದೆ.

ಆಂಧ್ರ ಪ್ರದೇಶದ ಶ್ರಾವಣಿ ಹೈದರಾಬಾದ್‌ನ ಮಧುರಾನಗರದಲ್ಲಿ ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಟಿಕ್‌ಟಾಕ್‌ನಲ್ಲಿ ದೇವರಾಜು ರೆಡ್ಡಿ ಎಂಬುವವನ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು, ಇನ್ನು ದೇವರಾಜು ಶ್ರಾವಣಿಯ ಬಳಿ ಪ್ರೀತಿಯ ನಾಟಕ ಆಡುವ ಜೊತೆಯಲ್ಲಿ ಆಕೆಯ ಜೊತೆ ಖಾಸಗಿ ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ. ನಂತರದ ದಿನಗಳಲ್ಲಿ ದೇವರಾಜು ರೆಡ್ಡಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಶ್ರಾವಣಿಗೆ ಬೆದರಿಕೆ ಹಾಕಿದ್ದಾನೆ ಮತ್ತು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಶ್ರಾವಣಿ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು ಎಂದು ಶ್ರಾವಣಿ ಕುಟುಂಬಸ್ಥರು ಹೇಳಿದ್ದಾರೆ.

ದೇವರಾಜು ರೆಡ್ಡಿಯ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇದರಿಂದ ಮನನೊಂದ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶ್ರಾವಣಿ ಪೋಷಕರು ದೂರು ನೀಡಿದ್ದು, ದೇವರಾಜು ರೆಡ್ಡಿ ವಿರುದ್ಧ ಕ್ರಮಕೈಗೊಳ್ಳ ಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹೈದರಬಾದ್‌ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top