ಟಾಲಿವುಡ್‌ಗೆ ಹಾರಿದ ಗಟ್ಟಿಮೇಳದ ಆರತಿ

ಜೀ ಕನ್ನಡದಲ್ಲಿ ಪ್ರಸಾರವಾಗೋ ನಂಬರ್‌ 1 ಧಾರಾವಾಹಿ ಗಟ್ಟಿಮೇಳ ಧಾರಾವಾಹಿಯಲ್ಲಿ ಶುಂಠಿ ಶಂಕ್ರ ಮತ್ತು ಭಜಾರಿ ಅಮೂಲ್ಯ ರೀತಿ ಫೇಮಸ್‌ ಕ್ಯಾರೆಕ್ಟರ್‌ ಅಂದ್ರೆ ಅದು ಆರತಿ ಕ್ಯಾರೆಕ್ಟರ್‌, ಆ ಕ್ಯಾರೆಕ್ಟರ್‌ ಮೂಲಕನೇ ಚಿರಪರಿಚಿತರಾಗಿರೋ ನಟಿ ಅಂದ್ರೆ ಅದು ಅಶ್ವಿನಿ, ಅಶ್ವಿನಿ ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯನ ಅಕ್ಕನಾಗಿ ನಟಿಸುತ್ತಿದ್ದಾರೆ. ಇದೀಗ ಅಶ್ವಿನಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದು, ಈ ಬಾರಿ ಅವ್ರು ಕನ್ನಡದಿಂದ ತೆಲುಗಿನ ಕಡೆ ಮುಖಮಾಡಿದ್ದಾರೆ.

ಗಟ್ಟಿಮೇಳದಲ್ಲಿ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳೋ ಅಶ್ವಿನಿ ಇದೀಗ ತೆಲುಗಿನಲ್ಲಿ ನಾಗ ಭೈರವಿಯ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ನಾಗ ಭೈರವಿ ಪಾತ್ರ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು. ಇದೀಗ ಅಭಿಮಾನಿಗಳು ಎರಡು ಕಡೆಯು ಮಾಡುತ್ತಿರ ಅಥವಾ ತೆಲುಗಿಗೆ ಹಾರುತ್ತಿರ ಅನ್ನೋ ಪ್ರಶ್ನೆಯನ್ನು ಹಾಕಿದ್ದಾರೆ.

ಇನ್ನು ಅಶ್ವಿನಿ ತೆಲುಗಿನಲ್ಲಿ ನಟಿಸ್ತಾ ಇರೋ ನಾಗ ಭೈರವಿಯಲ್ಲಿ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗದೇವತೆ ಮತ್ತು ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಶ್ವಿನಿ ಬಣ್ಣ ಹಚ್ಚುತ್ತಿದ್ದಾರಂತೆ. ಅಲ್ಲದೇ ಇದೊಂದು ವಿಭಿನ್ನ ಪಾತ್ರವಾಗಿದ್ದು, ಲಾಕ್‌ಡೌನ್‌ಗೂ ಮುಂಚೆ ಈ ಧಾರಾವಾಹಿಗೆ ಆಫರ್‌ ಬಂದಿತ್ತು, ಇದೀಗ ಈ ಧಾರಾವಾಹಿ ಸೆಟ್ಟೇರುತ್ತಿದ್ದು, ಇದಕ್ಕಾಗಿ ಅಶ್ವಿನಿ ಬರೋಬ್ಬರಿ 7 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

ʻನಾಗ ಭೈರವಿʼ ಧಾರಾವಾಹಿಯಲ್ಲಿ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರೊದ್ರಿಂದ ಆ ಮೂಲಕ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ಬದಲಾಗಲಿದೆ ಅನ್ನೋ ನಂಬಿಕೆಯಲ್ಲಿದ್ದಾರೆ. ಇನ್ನು ಈ ನಾಗ ಭೈರವಿ ಧಾರಾವಾಹಿಯಲ್ಲಿ ರಮ್ಯಾ ಕೃಷ್ಣ ಪ್ರಮು ಖ ಪಾತ್ರದಲ್ಲಿ ನಟಿಸ್ತಾ ಇದ್ದು, ಈಗಾಗಲೇ ಪ್ರೋಮೋ ಕೂಡ ರಿಲೀಸ್‌ ಆಗಿದ್ದು, ತೆಲುಗಿ ಜೀ ವಾಹಿನಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿದೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top