ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುಧ್ ಹೊರ ಬಂದ್ರ, ಬಿಗ್‍ಬಾಸ್‍ಗೆ ಹೋಗ್ತಿದ್ದಾರಾ ಅನಿರುಧ್

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುಧ್ ಹೊರ ಬಂದ್ರ, ಆ ಒಂದು ಕಾರ್ಯಕ್ರಮಕ್ಕಾಗಿ ತಮಗೆ ಮತ್ತೆ ಮರುಜೀವನ ಕೊಟ್ಟ ಧಾರಾವಾಹಿಯನ್ನೇ ಬಿಟ್ಟು ಅನ್ನೋ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರ್ತಾ ಇದೆ. ಹಾಗಾದ್ರೆ ನಿಜವಾಗಿಯು ಅನಿರುಧ್ ಜೊತೆ ಜೊತೆಯಲಿ ಧಾರಾವಾಹಿ ಬಿಟ್ರ, ಈ ಬಗ್ಗೆ ಅನಿರುಧ್ ಹೇಳಿದ್ದೇನು.. ಈ ಎಲ್ಲಾ ವಿಷಯವನ್ನು ಇವತ್ತು ನಾವ್ ನೋಡೋಣ.

ಸದ್ಯ ಸೌತ್ ಇಂಡಿಯನ್ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿರೋ ಧಾರಾವಾಹಿ ಅಂದ್ರೆ ಅದು ಜಿ ಕನ್ನಡದಲ್ಲಿ ಪ್ರಸಾರವಾಗೋ ಜೊತೆ ಜೊತೆಯಲಿ ಧಾರಾವಾಹಿ, ಈಗಾಗಲೇ ಧಾರಾವಾಹಿ ಶುರುವಾಗಿ ಒಂದು ವರ್ಷ ಕಳೆದಿದ್ದು ಯಶಸ್ಸಿಯಾಗಿ ಮುನ್ನುಗುತ್ತಿದೆ. ಧಾರಾವಾಹಿಯಲ್ಲಿ ಇರೋ ಕಂಟೆಂಟ್‍ಗೆ ಈಗಾಗಲೇ ಧಾರಾವಾಹಿ ಪ್ರಿಯರು ಮನಸೋತಿದ್ದು, ಧಾರಾವಾಹಿ ಶುರುವಾಗದಾಗಲಿದಂಲೂ ನಂ 1 ಧಾರಾವಾಹಿಯಾಗಿಯೇ ಇರಿಸಿದ್ದಾರೆ. ಆದ್ರೆ ಇದೀಗ ಈ ಧಾರಾವಾಹಿ ವಿಚಾರವಾಗಿ ಹೊಸದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನಿರುಧ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತಮ್ಮ ಪಾತ್ರದಿಂದ ಹೊರಬರುತ್ತಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಅನಿರುಧ್ ಜೊತೆ ಜೊತೆಯಲಿ ಧಾರಾವಾಹಿ ಬಿಟ್ಟು ಜನವರಿಯಲ್ಲಿ ಶುರುವಾಗಲಿರೋ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಹೋಗಲಿದ್ದಾರೆ ಅನ್ನೋ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಇನ್ನು ಈ ವಿಷಯ ನೋಡಿದ ಧಾರಾವಾಹಿ ಪ್ರಿಯರು ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಅನಿರುಧ್ ಅವರಿಗೆ ಒಂದೊಳ್ಳೆ ಹೆಸರು ಬಂದಿದೆ. ಆ ಧಾರಾವಾಹಿಯಿಂದ ಅವರು ಹೊರ ಹೋಗಬಾರದು ಅನ್ನೋ ಮಾತುಗಳನ್ನು ಸಹ ಹೇಳುತ್ತಿದ್ದಾರೆ. ಹೀಗಿರಬೇಕಾದ್ರೆ ಇದೀಗ ಈ ವಿಚಾರವಾಗಿ ಸ್ವತಃ ಅನಿರುಧ್ ಅವರೇ ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಅನಿರುಧ್ ಅವರು ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆಯುವುದರ ಬಗ್ಗೆ ಏನ್ ಹೇಳಿದ್ದಾರೆ ಕೇಳೋಣ ಬನ್ನಿ.

ಹೌದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರೋ ವಿಷಯದ ಬಗ್ಗೆ ಇದೀಗ ಅನಿರುಧ್ ಸ್ಪಷ್ಟನೆ ನೀಡಿದ್ದು, ಜೊತೆ ಜೊತೆಯಲಿ ಧಾರಾವಾಹಿಯನ್ನು ಬಿಟ್ಟು ಬೇರೆ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವಾಗಿ ನಿಮ್ಮ ಅನಿಸಿಕೆ ಏನೂ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top