ಜನವರಿ 29ಕ್ಕೆ ಪೊಗರು ಚಿತ್ರ ರಿಲೀಸ್

ಜನವರಿ ೧೩ರಂದು ವಿಜಯ್,ವಿಜಯ್ ಸೇತುಪತಿ ಅಭಿನಯದ ತಮಿಳು ಸಿನಿಮಾ `ಮಾಸ್ಟರ್’ ತೆರೆಕಾಣುತ್ತಿದ್ದು, ಈ ವೇಳೆ ತಮಿಳುನಾಡು ಸರ್ಕಾರ ಚಿತ್ರಮಂದಿರದಲ್ಲಿ ಶೇ ೧೦೦ರಷ್ಟು ಸೀಟ್ ಭರ್ತಿಗೆ ಅನುಮತಿಯನ್ನು ನೀಡಿದೆ. ತಮಿಳುನಾಡು ಸರ್ಕಾರದ ಅದೇಶದ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್ ಕೂಡ ತನ್ನ ಚಟುವಟಿಕೆಯಲ್ಲಿ ತೊಡಗಿದ್ದು, ಈಗಾಗಲೇ ಬಿಗ್ ಬಜೆಟ್ ಸಿನಿಮಾಗಳು ಏಪ್ರಿಲ್‌ನಲ್ಲಿ ತಮ್ಮ ಸಿನಿಮಾವನ್ನು ತೆರೆಗೆ ತರೋದಕ್ಕೆ ಪ್ಲಾನ್‌ಗಳನ್ನು ಮಾಡುತ್ತಿದೆ. ಇನ್ನು ಬಿಗ್‌ಬಜೆಟ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ರಿಲೀಸ್ ಮಾಡಬೇಕಾ, ಅಥವಾ ಓಟಿಟಿಯಲ್ಲಿ ತೆರೆಗೆ ತರಬೇಕಾ ಅನ್ನೋದರ ಬಗ್ಗೆಯೂ ಬಿಗ್ ಬಜೆಟ್ ಸಿನಿಮಾದ ನಿರ್ಮಾಪಕರು ಸಭೆ ಸೇರಿ ಚರ್ಚೆಯನ್ನು ನಡೆಸಿದ್ದಾರೆ. ಹೀಗಿರುವಾಗಲೇ ಇದೀಗ ಧ್ರುವಾ ಸರ್ಜಾ ಅಭಿನಯದ ಪೊಗರು ಸಿನಿಮಾ ಮಾತ್ರ ನಾವು ಜನವರಿಯಲ್ಲಿ ಥಿಯೇಟರ್‌ಗೆ ಬರೋದಾಗಿ ಹೇಳುತಿದ್ಯಂತೆ.ಜನವರಿ ೨೯ರಂದು ಸಿನಿಮಾ ತೆರೆಗೆ ತರೋದಾಗಿ ಚಿತ್ರತಂಡ ಹೇಳಿದ್ಯಂತೆ.ಈಗಾಗಲೇ ತಮಿಳು ಮತ್ತು ತೆಲುಗಿನಲ್ಲೂ ಚಿತ್ರ ತರುತ್ತಿರೋ ಚಿತ್ರತಂಡ ತಮಿಳುನಾಡಿನಲ್ಲಿ ಶೇ ೧೦೦ರಷ್ಟು ಸೀಟ್ ಭರ್ತಿಗೆ ಅನುಮತಿ ನೀಡಿರೋದ್ರಿಂದ ಏಕಕಾಲದಲ್ಲಿಯೇ ಸಿನಿಮಾವನ್ನು ತೆರೆಗೆ ತರೋ ಪ್ಲಾನ್‌ನಲ್ಲಿ ಇದೆ. ಒಂದು ವೇಳೆ ಜನವರಿ ೨೯ಕ್ಕೆ ರಿಲೀಸ್‌ಗೆ ಸಾಧ್ಯವಾಗದೇ ಇದ್ದರೆ ಫೆಬ್ರವರಿ ಮೊದಲ ವಾರದಲ್ಲಿ ಪೊಗರು ದರ್ಶನ ಮಾಡಲು ಚಿತ್ರತಂಡ ತಯಾರಿಯನ್ನು ಮಾಡಿಕೊಳ್ತಾ ಇದ್ಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top