ಜನರು ಎಣ್ಣೆ ಹೊಡೆಯೋದನ್ನು ಕಡಿಮೆ ಮಾಡಿದ್ದೇಕೆ..? ತನಿಖೆ ಮಾಡಿ ಆಯುಕ್ತರ ಆದೇಶ..!

ರಾಜ್ಯದ ಒಂದು ಆದಾಯ ಮೂಲ ಅಂದ್ರೆ ಅದು ಅಬಕಾರಿ, ಆದ್ರೆ ರಾಜ್ಯದಲ್ಲಿ ಎಣ್ಣೆ ಹೊಡೆಯೋರ ಸಂಖ್ಯೆ ಕಡಿಮೆಯಾಗಿದೆ ಅನ್ನೋ ಮಾಹಿತಿ ಈಗ ಹೊರ ಬಿದ್ದಿದ್ದು, ಈ ಬಗ್ಗೆ ತನಿಖೆ ಮಾಡಿ ವರದಿ ನೀಡಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಬಿಯರ್‌ ಮಾರಾಟದ ಪ್ರಮಾಣ ಕಡಿಮೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಬಿಯರ್‌ ಮಾರಾಟ ಪ್ರಮಾಣ ಜಾಸ್ತಿಯಾಗಬೇಕು. ಆದ್ರೆ ಈ ವರ್ಷ ಮಾರಾಟದ ಪ್ರಮಾಣ ಕಡಿಮೆಯಾಗಿದ್ದು, ಈ ಬಗ್ಗೆ ತಲೆಕಡಿಸಿಕೊಂಡಿರೋ ಅಬಕಾರಿ ಆಯುಕ್ತರು ಮೂರು ದಿನದೊಳಗೆ ವರದಿಯನ್ನು ನೀಡಬೇಕು ಎಂದು ಜಂಟಿ ಆಯುಕ್ತರಿಗೆ ಸೂಚಿಸಿದ್ದಾರೆ.

ಇನ್ನು ಈ ಬಗ್ಗೆ ಬಾರ್‌ ಮಾಲೀಕರ ಸಂಘದವರಾದ ಕರುಣಾಕರ್‌ ಹೆಗ್ಡೆ ಈ ವರದಿ ಹಾಸ್ಯಮಯವಾಗಿದ್ದು,ನಮಗೆ ಬಿಯರ್‌ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ. ಸ್ಟಾಕ್‌ ಇಲ್ಲದಿದ್ದರೆ ಸೇಲ್‌ ಆಗುವುದು ಹೇಗೆ ಎಂದು ಅಬಕಾರಿ ಇಲಾಖೆಗೆ ಪ್ರಶ್ನಿಸಿದ್ದಾರೆ.

ಬಿಯರ್‌ ಸೇಲ್‌ಗಿಂತ ಬೇರೆ ಮದ್ಯ ಪೂರೈಕೆಯಿಂದ ಸರ್ಕಾರಕ್ಕೆ ಅದಿಕ ಲಾಭವಾಗಿದ್ದು, ಬಿಯರ್‌ ಸೇಲ್‌ನಿಂದ ಲಾಭ ಕಡಿಮೆಯಿದ್ದು, ಹೀಗಾಗಿ ಬಿಯರ್‌ ಪೂರೈಕೆ ಕಡಿಮೆ ಮಾಡಿದ್ದು, ಪೂರೈಕೆ ಮಾಡಿ ಎಂದು ಬೇಡಿಕೆ ಇಟ್ಟರು ಪೂರೈಕೆ ಮಾಡಿರಲಿಲ್ಲ ಎಂದು ಬಾರ್‌ ಮಾಲೀಕರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top