ಚೆನ್ನೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿಗೆ ಕ್ರಿಸ್‌ ಮಾರಿಸ್‌ ಬಲ..

ಐಪಿಎಲ್‌ 2020 ಆರ್‌ಸಿಬಿ ಉತ್ತಮ ಪ್ರದರ್ಶನ ಕಾಣ್ತಾ ಇದ್ದು, ಮುಂದಿನ ಪಂದ್ಯ ಚೆನ್ನೈ ವಿರುದ್ಧ ನಡೆಯಲಿದೆ, ಈಗಾಗಲೇ ತಾವು ಆಡಿರೋ 5 ಪಂದ್ಯದಲ್ಲಿ ಮೂರರಲ್ಲಿ ಗೆಲುವು ಸಾಧಿಸಿರೋ ಆರ್‌ಸಿಬಿಗೆ ಬೌಲಿಂಗ್‌ ವಿಭಾಗದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಣ್ತಾ ಇದೆ. ಇದುವರೆಗೂ ನಡೆದ ಪಂದ್ಯದಲ್ಲಿ ಡೆತ್‌ ಓವರ್‌ನಲ್ಲಿ ಹೆಚ್ಚು ದುಬಾರಿಯಾಗುತ್ತಿರೋ ಆರ್‌ಸಿಬಿ ತಂಡಕ್ಕೆ ಡೆತ್‌ ಓವರ್‌ ಅನ್ನು ಸಮರ್ಥವಾಗಿ ಎದುರಿಸುವ ಆಟಗಾರನ ಅವಶ್ಯಕತೆ ಇದೆ.

ಸದ್ಯ ಈಸೂರು ಉಡಾನ ಮತ್ತು ನವದೀಪ್‌ ಶೈನಿ ಡೆತ್‌ ಓವರ್‌ನಲ್ಲಿ ಉತ್ತಮ ಪ್ರದರ್ಶನ ಕೊಡುವಲ್ಲಿ ಕೊಂಚ ಎಡವಿದ್ದು, ಕಳೆದ ಮ್ಯಾಚ್‌ನಲ್ಲಿ ಹೆಚ್ಚು ದುಬಾರಿಯಾಗಿರೋದು ಆರ್‌ಸಿಬಿ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇನ್ನು ತಂಡದಲ್ಲಿ ಕ್ರಿಸ್‌ ಮಾರಿಸ್‌ ಇದ್ದರು, ಗಾಯದ ಸಮಸ್ಯೆಯಿಂದ ಆರ್‌ಸಿಬಿಗೆ ಪ್ರಾರಂಭಿಕವಾಗಿ ಅವರು ಲಭ್ಯವಾಗಿರಲಿಲ್ಲ, ಆದ್ರೆ ಇದೀಗ ಕ್ರಿಸ್‌ ಮಾರಿಸ್‌ ಗಾಯದ ಸಮಸ್ಯೆಯಿಂದ ಚೇತರಿಕೆ ಕಂಡಿದ್ದು, ನೆಟ್‌ನಲ್ಲಿ ಹೆಚ್ಚು ಕಾಲ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಕ್ರಿಸ್‌ ಮಾರಿಸ್‌ ಗಾಯದ ಸಮಸ್ಯೆಯಿಂದ ಹೊರಬಂದಿರೋದು ಆರ್‌ಸಿಬಿ ತಂಡಕ್ಕೆ ಬಲ ತಂದುಕೊಟ್ಟಂತಾಗಿದ್ದು, ಶನಿವಾರ ನಡೆಯಲಿರೋ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಆರ್‌ಸಿಬಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಆಲ್‌ ಮೋಸ್ಟ್‌ ದೇರ್‌ ಅನ್ನೋ ಟೈಟಲ್‌ ಮೂಲಕ ಕ್ರಿಸ್‌ ಮೋರಿಸ್‌ ಪೋಟೋ ಟ್ಯಾಗ್‌ ಮಾಡಿದ್ದು, ಆ ಮೂಲಕ ಚೆನ್ನೈ ವಿರುದ್ಧ ಪಂದ್ಯದಲ್ಲಿ ಕ್ರಿಸ್‌ ಮಾರಿಸ್‌ ಕಣಕ್ಕೆ ಇಳಿಯೋದು ಬಹುತೇಕ ಪಕ್ಕಾ ಆಗಿದೆ. ಈ ಮೂಲಕ ಆರ್‌ಸಿಬಿಯ ಡೆತ್‌ ಓವರ್‌ ಸಮಸ್ಯೆಯನ್ನು ನಿಭಾಯಿಸುವ ಮೂಲಕ ತಂಡಕ್ಕೆ ಬಲ ತಂಡು ಕೊಡ್ತಾರ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top