ಚೆನ್ನೈ ತಂಡಕ್ಕೆ ಮತ್ತೊಂದು ಶಾಕ್‌..ಐಪಿಎಲ್‌ನಿಂದ ದೂರ ಉಳಿದ ಭಜ್ಜಿ..!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಈ ಬಾರಿಯ ಐಪಿಎಲ್‌ ಯಾಕೋ ಸರಿ ಇಲ್ಲ ಅನಿಸುತ್ತಿದೆ, ಒಂದರ ಮೇಲೆ ಒಂದು ಶಾಕಿಂಗ್‌ ಸುದ್ದಿಗಳು ಬರ್ತಾನೆ ಇದೆ. ಇತ್ತಿಚೆಗೆ ಸುರೇಶ್‌ ರೈನಾ ವೈಯುಕ್ತಿಕ ಕಾರಣವನ್ನು ನೀಡಿ ಐಪಿಎಲ್‌ನಿಂದ ಹೊರಬಂದು ಚೆನ್ನೈ ತಂಡಕ್ಕೆ ಶಾಕ್‌ ನೀಡಿದ್ರು,ಇನ್ನು ತಂಡದಲ್ಲಿ 12 ಸಿಬ್ಬಂಧಿಗಳಿಗೆ ಕೊರೊನಾ ದೃಢಪಟ್ಟು ಇಡೀ ತಂಡವೇ ಶಾಕ್‌ ಆಗಿತ್ತು, ಇದೀಗ ಚೆನ್ನೈ ತಂಡಕ್ಕೆ ಟರ್ಮಿನೆಟರ್‌ ಹರ್ಭಜನ್‌ ಸಿಂಗ್‌ ಶಾಕ್‌ ನೀಡಿದ್ದಾರೆ. ಹರ್ಭಜನ್‌ ಸಿಂಗ್‌ ಎರಡು ವರ್ಷಗಳಿಂದ ಚೆನ್ನೈ ತಂಡದ ಪರ ಐಪಿಎಲ್‌ನಲ್ಲಿ ಆಡುತ್ತಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿದ್ದಾರೆ. ವೈಯುಕ್ತಿಕ ಕಾರಣಗಳನ್ನು ನೀಡಿ ಭಜ್ಜಿ ಈ ಬಾರಿ ಐಪಿಎಲ್‌ನಿಂದ ಹಿಂದೆ ಸರಿದಿದ್ದು ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮತ್ತೊಮ್ಮೆ ಶಾಕ್‌ ಆಗಿದೆ ಜೊತೆಗೆ ತಂಡಕ್ಕೆ ದೊಡ್ಡ ನಷ್ಟವೂ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top