
ಐಪಿಎಲ್ 2020ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುತ್ತಿಲ್ಲ, ಇನ್ನು ಚೆನ್ನೈ ತಂಡದ ವಿರುದ್ಧ ಈಗಾಗಲೇ ಅನೇಕ ಹಿರಿಯ ಆಟಗಾರರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅದರಲ್ಲೂ ಪ್ರತಿ ಮ್ಯಾಚ್ ಮುಗಿದ ತಕ್ಷಣ ಚೆನ್ನೈ ವಿರುದ್ಧ ತಮಾಷೆ ಮಾಡುತ್ತಾ ತಂಡದ ಕಾಲನ್ನು ಏಳಿಯುತ್ತಿರುತ್ತಾರೆ. ಇದೀಗ ಮತ್ತೆ ಚೆನ್ನೈ ತಂಡದಲ್ಲಿ ಇರುವ ಕೆಲವು ಆಟಗಾರರ ವಿರುದ್ಧ ವೀರೂ ಟೀಕೆ ಮಾಡಿದ್ದಾರೆ. ಹೌದು ವೀರೂ ಚೈನ್ನೈ ತಂಡದ ಬೆನ್ನಿಗೆ ಮತ್ತೆ ಸಖತ್ ಆಗೇ ಗುಮ್ಮಿದ್ದಾರೆ. ಈ ಬಾರಿ ಅವರು ಚೆನ್ನೈ ತಂಡದ ಕೆಲ ಆಟಗಾರರ ಬಗ್ಗೆ ಮಾತನಾಡಿದ್ದಾರೆ.
ʻ ಚೆನ್ನೈ ತಂಡದ ಕೆಲವರು ತಮ್ಮ ಸ್ಥಾನವನ್ನು ಸರ್ಕಾರಿ ಕೆಲಸ ಎಂದುಕೊಂಡಿದ್ದಾರೆ. ಕೆಲಸ ಮಾಡದೇ ಇದ್ದರೂ ಸಂಬಳ ಬರುತ್ತದೆ ಅನ್ನೋ ಹಾಗಿದೆ ಈ ತಂಡದ ಸ್ಥಿತಿ ಎಂದು ಟೀಕಿಸಿದ್ದಾರೆ.
ಒಟ್ಟಿನಲ್ಲಿ ಒಂದಿಲ್ಲೊಂದು ಕಾರಣ ಚೆನ್ನೈ ತಂಡವನ್ನು ಟೀಕಿಸೋ ವೀರೂ ಈ ಬಾರಿ ತಮ್ಮ ಟೀಕಿಸೋ ಮೂಲಕ ಸುದ್ದಿಯಾಗಿದ್ದಾರೆ.