ಚೆನ್ನೈ ಗೆಲುವಿಗೂ,ವಾಟ್ಸನ್‌ ಟ್ವೀಟ್‌ಗೂ ಲಿಂಕ್‌ ವೈರಲ್‌ ಆಯ್ತು ಟ್ವೀಟ್‌..

ಐಪಿಎಲ್‌ 2020 ಪ್ರಾರಂಭದಲ್ಲಿ ಉತ್ತಮ ಸ್ಟಾರ್ಟ್‌ ತೆಗೆದುಕೊಂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನಂತರದ ಪಂದ್ಯಗಳಲ್ಲಿ ಸೋಲುವ ಮೂಲಕ ಅಂಕ ಪಟ್ಟಿಯಲ್ಲಿ ಐಪಿಎಲ್‌ ಇತಿಹಾಸದಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿತ್ತು. ಆದ್ರೆ ನಿನ್ನೆ ನಡೆದ ಪಂದ್ಯದಲ್ಲಿ ವಿಕೆಟ್‌ ನಷ್ಟವಿಲ್ಲದೆ ಗೆಲುವನ್ನು ಸಾಧಿಸುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಬಂದಿದೆ.

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್‌ ನೀಡಿದ್ದ 181 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಚೆನ್ನೈ ತಂಡ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾದ ವಾಟ್ಸನ್‌ ಮತ್ತು ಡುಪ್ಲೆಸಿ ಇಬ್ಬರ ಜೊತೆಯಾಟದಿಂದ ತಂಡ ಗೆಲುವಿನ ದಡಸೇರಿತು, ಜೊತೆಗೆ ವಿಕೆಟ್‌ ನಷ್ಟವಿಲ್ಲ ಚೆನ್ನೈ ಎರಡನೇ ಬಾರಿ ಗೆಲುವನ್ನು ಸಾಧಿಸುವ ಮೂಲಕ ಹೊಸ ದಾಖಲೆ ಬರೆಯಿತು. ಆದ್ರೆ ಇದೆಲ್ಲದರ ನಡುವೆ ವಾಟ್ಸನ್‌ ಪಂದ್ಯ ಶುರುವಾಗು ಮುಂಚೆ ಮಾಡಿದ್ದ ಒಂದು ಟ್ವೀಟ್‌ ಇದೀಗ ಸಖತ್‌ ವೈರಲ್‌ ಆಗಿದ್ದು ಚರ್ಚೆಗೂ ಕೂಡ ಗ್ರಾಸವಾಗಿದೆ. ಹೌದು ವಾಟ್ಸನ್‌ ನಿನ್ನೆ ಪಂದ್ಯಕ್ಕೂ ಮುಂಚೆ ತಮ್ಮ ಟ್ವೀಟರ್‌ ಖಾತೆಯಲ್ಲಿ The perfect game for CSK is coming ಎಂದಿದ್ದರು.

ಇನ್ನು ಪಂದ್ಯ ಗೆದ್ದ ನಂತರ ಐಪಿಎಲ್‌ ಅಧಿಕೃತ ಟ್ವೀಟರ್‌ ಖಾತೆಯಿಂದ ವಾಟ್ಸನ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ಬಂದಿದ್ದು, ನೀವು ನಿರೀಕ್ಷೆ ಮಾಡಿದ್ದಂತೆ ಬಂದಿದೆ. ನೀವು ಅದನ್ನು ಕಾರ್ಯಗತ ಮಾಡಿದ್ದೀರಿ, ನೀವು ಪಂದ್ಯದಲ್ಲಿ ಚೆನ್ನಾಗಿ ಆಡುವ ಮೂಲಕ ಅದನ್ನು ಸಾಬೀತು ಮಾಡಿದ್ರಿ ಎಂದು ಶುಬಹಾರೈಸಿದ್ದಾರೆ. ಆದ್ರೆ ಪಂದ್ಯಕ್ಕೂ ಮುಂಚೆ ಈ ರೀತಿ ಟ್ವೀಟ್‌ ಮಾಡಿರೋ ವಾಟ್ಸನ್‌ ಟ್ವೀಟ್‌ ನೋಡಿದ ಕೆಲವ್ರು ಈ ಬಗ್ಗೆ ಚರ್ಚೆ ಶುರುಮಾಡಿದ್ದು, ಪಂದ್ಯದ ದಿಕ್ಕು ಮೊದಲೇ ನಿಯೋಜಿತವಾಗಿ ಬದಲಾವಣೆ ಮಾಡಲಾಗಿತ್ತ ಅನ್ನೋ ಅನುಮಾನಗಳನ್ನು ಹೊರಹಾಕುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top