ಚುನಾವಣೆಯಲ್ಲಿ ಸೋತರು ಊರಿಗೆ ಸಿಹಿ ಹಂಚಿದ ಅಭ್ಯರ್ಥಿ

ಸಾಮಾನ್ಯವಾಗಿ ಚುನಾವಣೆಯಲ್ಲಿ ಗೆದ್ದ ವ್ಯಕ್ತಿ ತಮ್ಮ ಮತದಾರರಿಗೆ ಧನ್ಯವಾದ ಹೇಳೋದು ಊಟ ಹಾಕಿಸೋದು,ಅಥವಾ ಒಂದಿಷ್ಟು ಉಡುಗೊರೆ ಕೊಡೋದನ್ನ ನಾವು ನೀವು ನೋಡಿರುತ್ತೇವೆ.ಆದ್ರೆ ಇಲ್ಲೊಂದು ಊರಿನಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ಘಟನೆಯೊಂದು ನಡೆದಿದೆ.ಹೌದು ಈ ಊರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬ ತನ್ನ ಊರಿನ ಪ್ರತಿಯೊಂದು ಮನೆಗೂ ಸಿಹಿ ಹಂಚುವ ಮೂಲಕ ಡಿಫರೆಂಟ್ ಆಗಿದ್ದಾರೆ.ಈ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗಂಗಸಂದ್ರ ಗ್ರಾಮಪಂಚಾಯಿಯಲ್ಲಿ ನಡೆದಿದೆ.ಸುನಿಲ್ ಕುಮಾರ್ ಎಂಬ ಅಭ್ಯರ್ಥಿ ಸಿಹಿ ಹಂಚಿದ ವ್ಯಕ್ತಿಯಾಗಿದ್ದು. ಚುನಾವಣೆಯಲ್ಲಿ ಕೇವಲ 2ಮತಗಳಲ್ಲಿ ಸೋಲನ್ನು ಅನುಭವಿಸಿದ್ರು.

ಇದೀಗ ಸೋತರು ಮನೆ ಮನೆಗೆ ತೆರಳಿ ಸಿಹಿ ಹಂಚುವ ಮೂಲಕ ಗ್ರಾಮದಲ್ಲಿ ಸುನಿಲ್ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top