ಚುನಾವಣಾ ಅಖಾಡಕ್ಕೆ ಬಿಗ್‍ಬಾಸ್ ದಿವಾಕರ್ ಎಂಟ್ರಿ..

ಕರ್ನಾಟಕದಲ್ಲಿ ಸದ್ಯ ಎರಡು ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೀತಾ ಇದ್ದು, ಆರ್‍ಆರ್ ನಗರ ಮತ್ತು ಶಿರಾ ವಿಧಾನ ಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೀತಾ ಇದೆ. ಈಗಾಗಲೇ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯಲ್ಲಿ ಇರೋವಾಗಲೇ ವಿಧಾನ ಸಭಾ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕೆ ಇಳಿಯೋ ಸುದ್ದಿ ಇದೀಗ ಹೊರ ಬಿದ್ದಿದೆ. ಹೌದು ಶಿರಾ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯೋ ಉಪ ಚುನಾವಣೆಯಲ್ಲಿ ಬಿಗ್‍ಬಾಸ್ ಸೀಸನ್ 5ರ ರನ್ನರ್ ಅಪ್ ದಿವಾಕರ್ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ದಿವಾಕರ್ ಈ ಬಗ್ಗೆ ಹೇಳಿಕೊಂಡಿದ್ದು,

ನಾನು ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ, ನನ್ನ ಅನೇಕ ಸ್ನೇಹಿತರು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ರೀತಿಯ ತೀರ್ಮಾನವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಯಾವ ಪಕ್ಷದಿಮದ ಸ್ಪರ್ಧೆ ಮಾಡಬೇಕು ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೋ ಅನ್ನೋ ನಿರ್ಧಾರವನ್ನು ಒಂದು ವಾರದಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಕೆಲವರನ್ನು ಸಂಪರ್ಕ ಮಾಡೋ ಪ್ರಯತ್ನ ಮಾಡುತ್ತಿದ್ದೇನೆ. ನನಗೂ ಒಂದಿಷ್ಟು ಕರೆಗಳೂ ಕೂಡ ಬರುತ್ತಿವೆ ಎಂದು ಹೇಳಿದ್ದಾರೆ.

ನನಗೆ ಜನರ ಮೇಲೆ ನಂಬಿಕೆ ಇದೆ. ಜನರು ನನ್ನನ್ನು ಇಲ್ಲಿಯವರೆಗೂ ಇಷ್ಟಪಟ್ಟಿದ್ದಾರೆ. ನಾನು ಚುನಾವಣೆಗೆ ನಿಂತರೆ ನನ್ನನ್ನು ಬೆಂಬಲಿಸುತ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದ ದಿವಾಕರ್. ನಾನು ಈಗಲೂ ಸೇಲ್ಸ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಜನ ಪ್ರೀತಿಯನ್ನ ತೋರಿಸುತ್ತಿದ್ದಾರೆ. ನನ್ನ ಮೇಲೆ ಬೇರೆಯೇ ಅಭಿಪ್ರಾಯ ಇದೆ. ನಾನು ಜನರ ಮಧ್ಯೆ ಇರಲು ಇಷ್ಟ ಪಡುತ್ತೇನೆ. ನನಗೆ ಬಿಗ್‍ಬಾಸ್ ದಿವಾಕರ್ ಎಂದು ವೋಟ್ ಹಾಕುವುದು ಬೇಡ, ನಾನು ಸಾಮಾನ್ಯ ಮನುಷ್ಯನಾಗಿ ಚುನಾವಣೆಗೆ ದುಮುಕುತ್ತಿದ್ದೇನೆ ಎಂದು ಹೇಳಿದ್ದಾರೆ.

ದಿವಾಕರ್ ಶಿರಾ ಉಪಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ತೀರ್ಮಾನ ಸರಿನಾ..ತಪ್ಪಾ ಈ ಬಗ್ಗೆ ನೀವ್ ಏನ್ ಹೇಳ್ತಿರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top