ಚೀನಾ ಅಧ್ಯಕ್ಷರನ್ನು ಟೀಕಿಸಿದ್ದಕ್ಕೆ ಉದ್ಯಮಿಗೆ 18 ವರ್ಷ ಜೈಲು..

ಕೊರೋನಾ ವಿಚಾರದಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರನ್ನು ʻವಿದೂಷಕʼ ಎಂದು ಟೀಕಿಸಿದ್ದಕ್ಕೆ ಚೀನಾದ ಉದ್ಯಮಿಯನ್ನು ಭ್ರಷ್ಟಾಚಾರ ಆರೋಪದಡಿ 18 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಉದ್ಯಮಿ ಸ್ವಯಂ ಪ್ರೇರಿತವಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್‌ ಕೂಡ ಹೇಳಿದೆ.

ಸರ್ಕಾರಿ ಸೌಮ್ಯದ ರಿಯಲ್‌ ಎಸ್ಟೆಟ್‌ನ ಮಾಜಿ ಮುಖ್ಯಸ್ಥರಾಗಿದ್ದ ರೆನ್‌ ಝಿಕ್ಸಿಯಾಂಗ್‌ ಎಂಬ 69 ವರ್ಷದ ಉದ್ಯಮಿ, ಕಮ್ಯೂನಿಸ್ಟ್‌ ಪಾರ್ಟಿಯ ಆಂತರಿಕ ವಲಯದಲ್ಲಿ ಗುರುತಿಸಿಕೊಂಡವಾಗಿದ್ದರು. ಮಾರ್ಚ್‌ನಲ್ಲಿ ಚೀನಾ ಅಧ್ಯಕ್ಷರನ್ನು ವಿರೋಧಿಸಿ ಲೇಖನವೊಂದನ್ನು ಬರೆದಿದ್ದರು.

ಕರೋನಾ ಸಮಯದಲ್ಲಿ ರಾಜಕಾರಣಿಗಳು ತಮ್ಮ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದ್ದು, ಅಧ್ಯಕ್ಷರನ್ನು ವಿದೂಷಕ ಎಂದು ಟೀಕೆ ಮಾಡಿದ್ದರು, ಈ ಟೀಕೆ ಮಾಡಿದ ಕೆಲವೇ ದಿನದಲ್ಲಿ ರೆನ್‌ ಝಿಕ್ಸಿಯಾಂಗ್‌ ನಾಪತ್ತೆಯಾಗಿದ್ದರು. ಇನ್ನು ಅವರ ವಿರುದ್ಧ ಭ್ರಷ್ಟಾಚಾರ,ಕಳ್ಳಸಾಗಾಣಿಕೆ ಅರೋಪವನ್ನು ಮಾಡಲಾಗಿತ್ತು. ಇದೀಗ ಅದೇ ಆರೋಪದಲ್ಲಿ 18 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top