
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಕ್ಲೂರಹಳ್ಳಿಯ ಜಮೀನು ಒಂದರಲ್ಲಿ ಲಕ್ಷಾಂತರ ಹಣ ಪತ್ತೆ ಆಗಿರುವ ಘಟನೆ ನಡೆದಿದೆ. ಕಂತೆ ಕಂತೆ ಹಣ ಇದಾಗಿದ್ದು, ಯಾರೋ ದುಷ್ಕರ್ಮಿಗಳು ಕದ್ದಿರುವ ಹಣವನ್ನು ಹೆದರಿ ಜಮೀನಿನಲ್ಲಿ ಎಸೆದು ಹೋಗಿದ್ದಾರೆ ಎಂಬ ಅನುಮಾನ ಶುರುವಾಗಿದೆ. ಈ ರೀತಿ ಅನುಮಾನ ಬರಲು ಕಾರಣವಿದ್ದು, ಮೂರು ದಿನಗಳ ಹಿಂದೆ ದಿಲೀಫ್ ಬ್ಯೂಲ್ಡ್ಕಾನ್ ಕಂಪನಿಯಲ್ಲಿ 36 ಲಕ್ಷ ರೂಪಾಯಿ ಕಳುವಾಗಿತ್ತು, ಇದೀಗ ದಿಲೀಪ್ ಬ್ಯುಲ್ಡ್ ಕಾನ್ ಕಚೇರಿಯ ಹಿಂದೆ ಇರೋ ಜಮೀನಿನಲ್ಲಿ ಹಣದ ಕಂತೆ ಪತ್ತೆಯಾಗಿದೆ. ಹೀಗಾಗಿ ಕದ್ದವರು ಹಣವನ್ನು ಇಲ್ಲಿ ಎಸೆದು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಜಮೀನಿನಲ್ಲಿ ಕಂತೆ ಕಂತೆ ಹಣ ಬಿದ್ದಿರುವುದನ್ನು ನೋಡಿದ ಗ್ರಾಮಸ್ಥರು ಗಾಬರಿಯಾಗಿದ್ದು, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.