ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ 70ರ ಅಜ್ಜ ಪಕ್ಕದ ಬೆಡ್‌ನಲ್ಲಿದ್ದ 55ರ ಮಹಿಳೆ ಜೊತೆ ಲವ್‌..!

ಪ್ರೀತಿ ಕುರುಡು ಅನ್ನೋ ಮಾತಿದೆ, ಪ್ರೀತಿ ಯಾವಾಗ..ಎಲ್ಲಿ..ಯಾರ ಮೇಲೆ ಹುಟ್ಟುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ, ಅದೇ ರೀತಿ ಇಲ್ಲೊಂದು ಡಿಫರೆಂಟ್‌ ಲವ್‌ ಸ್ಟೋರಿ ಒಂದು ಇದೆ. ಈ ಲವ್‌ ಸ್ಟೋರಿ ಹುಟ್ಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಹೋಗಿದ್ದ 70 ವರ್ಷದ ಅಜ್ಜನಿಗೆ ಪಕ್ಕದ ಬೆಡ್‌ನಲ್ಲಿದ್ದ 55ರ ಮಹಿಳೆ ಮೇಲೆ ಲವ್‌ ಆಗಿರೋ ಘಟನೆ ನಡೆದಿರೋದು ಮಧ್ಯ ಪ್ರದೇಶ್‌ನಲ್ಲಿ.

ಆಸ್ಪತ್ರೆಯಲ್ಲೇ 70ರ ಅಜ್ಜ ಮತ್ತು 55ರ ಮಹಿಳೆಗೆ ಲವ್‌ ಆಗಿದ್ದು, ನಂತರ ನೆರೆಹೊರೆಯವರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಓಂಕಾರ್‌ ಸಿಂಗ್‌ ಮತ್ತು ಗುಡ್ಡಿಬಾಯ್‌ ಮದುವೆಯಾದ ಲವರ್‌ಗಳು, ಇವರು ಜಿಲ್ಲಾ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇಬ್ಬರು ಅಕ್ಕ ಪಕ್ಕದ ಬೆಡ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು, ಇಬ್ಬರ ನಡುವೆ ಪರಿಚಯವಾಗಿದ್ದು, ಪರಸ್ಪರ ಮಾತನಾಡುತ್ತಾ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಇಬ್ಬರು ಪ್ರೀತಿಯಲ್ಲಿ ಇರೋದು ಗೊತ್ತಾಗಿ ಇಬ್ಬರು ಒಟ್ಟಿಗೆ ಸಮಯ ಕಳೆಯಲು ನಿರ್ಧಾರ ಮಾಡಿದ್ದಾರೆ. ನಂತರ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಕೂಡಲೇ ಓಂಕಾಋ ಸಿಂಗ್‌ ಮಹಿಳೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇನ್ನು ಓಂಕಾರ್‌ಗೆ ೪ ಗಂಡು ಮಕ್ಕಳು ೧೨ ಜನ ಮೊಮ್ಮಕ್ಕಳಿದ್ದು, ಅವರ ಬಳಿ ತಮ್ಮ ಪ್ರೀತಿಯ ವಿಷಯವನ್ನು ವಿವರಿಸಿದ್ದಾರೆ. ನಂತರ ಕುಟುಂಬದ ಒಪ್ಪಿಗೆ ಪಡೆದು , ಹಳ್ಳಿಯಲ್ಲಿ ಹಳ್ಳಿ ಜನರ ಮುಂದೆ ಮದುವೆಯಾಗಿದ್ದಾರೆ. ಅಲ್ಲದೇ ಮೆರವಣಿಗೆ ಮೂಲಕ ಇಡೀ ಹಳ್ಳಿಯನ್ನು ಸುತ್ತಿದ್ದಾರೆ. ಇನ್ನು ಓಂಕಾರ್‌ ಸಿಂಗ್‌ ಮೊದಲ ಪತ್ನಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು, ಇದೀಗ ಗುಡ್ಡಿಬಾಯ್‌ಯನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದು, ಹೊಸ ಜೀವನ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top