ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ವಿರುದ್ಧ ದಾಖಲಾಯ್ತು ದೂರು..

ಸ್ಯಾಂಡಲ್ವುಡ್‌ ಬಾಕ್ಸಾಫಿಸ್‌ ಸುಲ್ತಾನ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ವಿರುದ್ಧ ದೂರು ದಾಖಲಾಗಿದೆ. ಆರ್‌ ಆರ್‌ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಿದ್ದ ನಟ ದರ್ಶನ, ಶುಕ್ರವಾರ ಬೆಳಗ್ಗೆಯಿಂದ ಸಂಜೆ ವರೆಗೆ ಆರ್‌ ಆರ್‌ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರವನ್ನು ನಡೆಸಿದ್ರು, ದರ್ಶನ್‌ ಪ್ರಚಾರದ ಸಮಯದಲ್ಲಿ ಕೋವಿಡ್‌-೧೯ ಮಾರ್ಗಸೂಚಿಯನ್ನು ಪಾಲಿಸಿಲ್ಲ ಎನ್ನುವ ಆರೋಪ ಇದೀಗ ದರ್ಶನ್‌ ವಿರುದ್ಧ ಕೇಳಿ ಬಂದಿದ್ದು, ಕೊರೊನಾ ಮಾರ್ಗಸೂಚಿ ಪಾಲಿಸದೆ ಪ್ರಚಾರ ಮಾಡಿದ ದರ್ಶನ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top