ಚಾಲಾಕಿ ಬ್ರ್ಯಾಂಡ್‌ ಈ ಸೂಪರ್‌ ಸ್ಟಾರ್‌..

ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಅಭಿನಯದ ʻಸೂಪರ್‌ ಸ್ಟಾರ್‌ʼ ಸಿನಿಮಾ ಈಗಾಗಲೇ ಸೆಟ್ಟೇರಿದ್ದು, ಟೀಸರ್‌ನಿಂದ ಸಖತ್‌ ಸೌಂಡ್‌ ಕೂಡ ಮಾಡಿತ್ತು, ಇದೀಗ ಸೂಪರ್‌ ಸ್ಟಾರ್‌ ಚಿತ್ರದ ಟೈಟಲ್‌ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಖತ್‌ ಸೌಂಡ್‌ ಮಾಡ್ತಾ ಇದೆ.

ಭರ್ಜರಿ ಚೇತನ್‌ ಸಾಹಿತ್ಯದಲ್ಲಿ ಬಂದಿರೋ ಈ ಹಾಡಿಗೆ ಧ್ವನಿ ನೀಡಿದ್ದಾರೆ ಶಶಾಂಕ್‌ ಶೇಷಗಿರಿ. ತುಪಾಕಿ ಸೌಂಡಿನಲ್ಲೂ ಸೌಂಡು ಮಾಡೋ ಸೂಪರ್‌ ಸ್ಟಾರ್‌, ಚಾಲಾಕಿ ಬ್ರ್ಯಾಂಡಿನಲ್ಲೂ ಸೂಪರ್‌ ಸ್ಟಾರ್‌ ಅನ್ನೋ ಈ ಹಾಡು ಸಖತ್‌ ಮಾಸ್‌ ಆಗಿದ್ದು, ಈ ಮಾಸ್‌ ಹಾಡಿಗೆ ಮೊದಲಿ ಇಂಟ್ರೋ ಹೇಳಲಿದ್ದಾರೆ ರಾಕಿಂಗ್‌ ಸ್ಟಾರ್‌ ಯಶ್‌ ಅನೆನ ಪಳಗಿಸೋಕೆ ಅಂಕುಶ ಇರಬೇಕು ಹುಲಿನ ಹೊಡಿಯೋಕೆ ಕುರಿನೇ ಕಟ್ಟಬೇಕು ಅನ್ನೋ ಯಶ್‌ ಅವರ ಧ್ವನಿಯಲ್ಲಿ ಬರೋ ಡೈಲಾಗ್‌ ಮೂಲಕ ಹಾಡು ಪ್ರಾರಂಭವಾಗಲಿದ್ದು ಮಾಸ್‌ ಫೀಲ್‌ ಇಷ್ಟ ಪಡೋ ಹುಡುಗರಿಗೆ ಸಖತ್‌ ಇಷ್ಟವಾಗಲಿದೆ.

ಇನ್ನು ಸೂಪರ್‌ ಸ್ಟಾರ್‌ ಚಿತ್ರದ ಹಾಡುಗಳಿಗೆ ರಾಘವೇಂದ್ರ ವಿ ಮ್ಯೂಸಿಕ್‌ ನೀಡಿದ್ದು ಚಿತ್ರಕ್ಕೆ ಮೈಲಾರಿ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್‌ ಮುಗಿದಿದ್ದು, ಮುಂದಿನ ವರ್ಷ ಎರಡನೇ ತಿಂಗಳ ವೇಳೆಗೆ ಚಿತ್ರವನ್ನು ತೆರೆಮೇಲೆ ತರೋ ಪ್ಲಾನ್‌ನಲ್ಲಿ ಇದ್ದಾರೆ. ಈ ಸೂಪರ್‌ ಸ್ಟಾರ್‌ ಚಿತ್ರ ರಮೇಶ್‌ ವೆಂಕಟೇಶ್‌ ಬಾಬು ಅವರ ಡೈರೆಕ್ಷನ್‌ನಲ್ಲಿ ಮೂಡಿಬರ್ತಾ ಇದ್ದು, ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top