ಚಹಲ್ ಬೌಲಿಂಗ್‍ನ ಯಾರು ಯಾಕೆ ಹೊಗಳೋದಿಲ್ಲ

ಯಜುವೇಂದ್ರ ಚಹೆಲ್, ಟೀಂ ಇಂಡಿಯಾದ ಮತ್ತು ಆರ್‍ಸಿಬಿ ತಂಡದ ಟ್ರಂಪ್ ಕಾರ್ಡ್, ಪ್ರತಿ ಪಂದ್ಯದಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸುತ್ತಾರೆ. ಈ ಬಾರಿಯ ಐಪಿಎಲ್‍ನಲ್ಲೂ ಉತ್ತಮ ಪ್ರದರ್ಶನ ನೀಡ್ತಾ ಇರೋ ಚಹೆಲ್ 8 ಪಂದ್ಯದಿಂದ 11 ವಿಕೆಟ್ ಪಡೆಯುವ ಮೂಲಕ ಟಾಪ್ ವಿಕೆಟ್ ಟಾಪರ್ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಐಪಿಎಲ್ ಕೆರಿಯರ್‍ನಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದು ಟಿ20 ಕೆರಿಯರ್‍ನಲ್ಲಿ ಒಟ್ಟು 200 ವಿಕೆಟ್ ಪಡೆದ ದಾಖಲೆ ಚಹೆಲ್ ಹೆಸರಿನಲ್ಲಿದೆ. ಪ್ರತಿ ಮ್ಯಾಚ್‍ನಲ್ಲೂ ಪ್ರಮುಖ ಟೈಂನಲ್ಲಿ ವಿಕೆಟ್ ಕೀಳುವ ಮೂಲಕ ತಂಡಕ್ಕೆ ಗೆಲುವಿನ ದಡ ಸೇರಲು ಪ್ರಮುಖ ಪಾತ್ರವಹಿಸೋ ಈ ಬೌಲರ್ ಬಗ್ಗೆ ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಮಾತನಾಡಿದ್ದಾರೆ. ಹೌದು ಮಾಜಿ ಟೀಂ ಇಂಡಿಯಾದ ಆಟಗಾರ, ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿರೋ ನಾಯಕ ಗೌತಮ್ ಗಂಭೀರ್ ಮಾತನಾಡಿದ್ದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ಈ ಬಾರಿಯ ಐಪಿಎಲ್‍ನಲ್ಲಿ ಯಜುವೇಂದ್ರ ಚಹೆಲ್ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ಕೆಲವು ಮ್ಯಾಚ್‍ಗಳಲ್ಲಿ ವಿಕೆಟ್ ತಗೆಲು ಸಫಲರಾಗದಿದ್ರು, ರನ್ ಕಂಟ್ರೋಲ್ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ, ಆದ್ರೆ ಈ ಬಾರಿಯ ಐಪಿಎಲ್‍ನಲ್ಲಿ ಎಲ್ಲರೂ `ರಬಾಡ,ಆರ್ಚರ್,ರಶೀದ್ ಖಾನ್’ ಬೌಲಿಂಗ್ ಅನ್ನು ಹೊಗಳುತ್ತಿದ್ದಾರೆ. ಆದ್ರೆ ಯಜುವೇಂದ್ರ ಚಹೆಲ್ ಈ ಐಪಿಎಲ್‍ನಲ್ಲಿ ಉತ್ತಮವಾದ ಸ್ಪೆಲ್ ಮಾಡುತ್ತಿದ್ದಾರೆ ಅವರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೈತಪ್ಪಿ ಹೋಗುತ್ತಿದ್ದ ಪಂದ್ಯವನ್ನು ಎರಡು ಬಾಲ್‍ಗೆ ಎರಡು ವಿಕೆಟ್ ಕೀಳುವ ಮೂಲಕ ತಂಡದ ಗೆಲುವಿಗೆ ಕಾರಣಕರ್ತರಾಗಿದ್ರು, ಇನ್ನು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆಹೆಲ್ ಕೊನೆಯ ಓವರ್‍ನಲ್ಲಿ 6 ಬಾಲ್‍ಗೆ 2ರನ್ ಬೇಕಾಗಿದ್ದಾಗಲು, ಪಂದ್ಯವನ್ನು ಕೊನೆಯ ಬಾಲ್‍ವರೆಗೂ ಕರೆದುಕೊಂಡು ಹೋಗುವ ಮೂಲಕ ಪಂದ್ಯದ ದಿಕ್ಕನು ಬದಲಿಸೋ ಪ್ರಯತ್ನವನ್ನು ಸಹ ಮಾಡಿದ್ರು,ಹೀಗಾಗಿ ಉತ್ತಮ ಸ್ಪೆಲ್ ಮಾಡಿದ್ರು ಜಹೆಲ್ ಬೌಲಿಂಗ್ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಐಪಿಎಲ್‍ನಲ್ಲಿ ಒಟ್ಟು 8 ಪಂದ್ಯದಲ್ಲಿ 11 ವಿಕೆಟ್ ಪಡೆದಿರೋ ಜಹೆಲ್ ಟಾಪ್ ಬೌಲರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.

ಯಜುವೇಂದ್ರ ಚಹೆಲ್ ಬಗ್ಗೆ ಗೌತಮ್ ಗಂಭೀರ್ ಕೊಟ್ಟಿರೋ ಹೇಳಿಕೆ ಬಗ್ಗೆ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top