ಚಹಲ್‌ ಮ್ಯಾನ್‌ ಆಫ್‌ ದಿ ಮ್ಯಾಚ್‌ ತೆಗೆದುಕೊಳ್ಳುವಾಗ ಕುಣಿದು ಕುಪ್ಪಳಿದ ಭಾವಿ ಪತ್ನಿ-ವಿಡಿಯೋ ವೈರಲ್‌

ಆರ್‌ಸಿಬಿ ಮತ್ತು ಹೈದರಬಾದ್‌ ಮ್ಯಾಚ್‌ನಲ್ಲಿ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣವಾದ ಸ್ಪಿನ್ನರ್ ಯಜುವೇಂದ್ರ ಚಹಲ್‌, ಪಂದ್ಯದಲ್ಲಿ ಮೂರು ವಿಕೆಟ್‌ ಪಡೆಯುವ ಮೂಲಕ ಆರ್‌ಸಿಬಿ ಗೆಲುವಿಗೆ ಕಾರಣರಾದ್ರು, ಪಂದ್ಯ ಮುಗಿದ ಮೇಲೆ ಚಹಲ್‌ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿ ಪಡೆಯುವ ವೇಳೆ ಟಿವಿ ಮುಂದೆ ಚಹಲ್‌ ಭಾವಿ ಪತ್ನಿ ಧನಶ್ರೀ ಸಂತೋಷದಿಂದ ಕುಣಿದು ಡ್ಯಾನ್ಸ್‌ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದ್ದು. ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ. ಧನಶ್ರೀ ಮತ್ತು ಚಹಲ್‌ ಎಂಗೇಜ್ಮೆಂಟ್‌ ಲಾಕ್‌ಡೌನ್‌ ಟೈಂನಲ್ಲಿ ನಡೆದಿತ್ತು. ಇನ್ನು ಧನಶ್ರೀ ಕೂಡ ಇವೇಂಟ್‌ ಮ್ಯಾನೆಜ್‌ಮೆಂಟ್‌ ಮಾಡುತ್ತಿದ್ದು. ಜೊತೆ ಡ್ಯಾನ್ಸರ್‌ ಕೂಡ ಹೌದು ಅಷ್ಟೇ ಅಲ್ಲದೇ ಯೂಟ್ಯೂಬರ್‌ ಕೂಡ ಹೌದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top