ಚಂದನ್ ‘ಪವರ್’ ಫುಲ್ ರೀ ಎಂಟ್ರಿ

ಚಂದನ್ ಶರ್ಮಾ, ಇವ್ರು ಯಾರು? ಏನು? ಅಂತ ಹೇಳ್ಬೇಕಾಗಿಲ್ಲ. ನ್ಯೂಸ್ ಚಾನಲ್ ನೋಡೋರಿಗೆ ಇವ್ರು ಚಿರಪರಿಚಿತ. ಕನ್ನಡ‌ ದೃಶ್ಯ ಮಾಧ್ಯಮ‌ ಲೋಕದ ಶೈನಿಂಗ್ ಸ್ಟಾರ್…! ಕನ್ನಡದ ಅರ್ನಾಬ್ ಅಂತನೂ ಜನ ಕರೀತಾರೆ. ಆದ್ರೆ, ಇವರಿಗೆ ಕನ್ನಡದ ಚಂದನ್ ಅಂತ ಕರೆಸಿಕೊಳ್ಳೋದೇ ಇಷ್ಟ!ಜನಶ್ರೀ ಚಾನಲ್ ಸೇರಿದಂತೆ ಕೆಲವೊಂದಿಷ್ಟು ಚಾನಲ್ ಗಳಲ್ಲಿ‌ ಕೆಲಸ ಮಾಡಿದ್ದರೂ‌ ಕೂಡ ಬಿ.ಟಿವಿ ಸ್ಕ್ರೀನ್ ನಲ್ಲಿ ‘ಭರವಸೆಯ ಬೆಳಕಾಗಿ’ ಪಾಪ್ಯುಲರ್ ಆದವರು.‌
ಇವ್ರು ಸ್ಕ್ರೀನ್ ಮೇಲೆ ಬಂದ್ರೆ ಸಾಕು ಟಿಆರ್ ಪಿಗೇನು ಕೊರತೆ ಇರ್ಲಿಲ್ಲ. ಇಂಥಾ ಚಂದದ ಚಂದನ್ ಶರ್ಮಾ ಇದ್ದಕ್ಕಿದ್ದಂತೆ ಕಾಣೆ ಆಗ್ಬಿಟ್ಟಿದ್ರು. ಸ್ಕ್ರೀನ್ ಮೇಲೆ ಇವ್ರನ್ನ ಡೈಲಿ ನೋಡ್ತಿದ್ದ ಜನ ಚಂದನ್ ಶರ್ಮಾ ಎಲ್ಲೋದ್ರು? ಮೀಡಿಯಾ ಬಿಟ್ಟೇ ಬಿಟ್ರಾ? ಯಾವಾಗ ಕಮ್ ಬ್ಯಾಕ್ ಆಗ್ತಾರೆ ಅಂತ ವ್ಹೇಟ್ ಮಾಡ್ತಿದ್ರು.ಇದರ ನಡುವೆ ಇದ್ದಕ್ಕಿದ್ದಂತೆ ಬಿಟಿವಿ ಬಿಟ್ಟಿದ್ದ ಚಂದನ್ ಶರ್ಮಾ ಟಿವಿ 9 ಪರದೆ ಅಲಂಕರಿಸಿದ್ರು. ಅದೇ ಚಾರ್ಮ್, ಅದೇ ಖದರ್ ನಲ್ಲಿ ಟಿವಿ9 ನಲ್ಲಿ‌ ಚಂದನ್ ಶರ್ಮಾ ಅಬ್ಬರಿಸಿದ್ರು. ಆದ್ರೆ, ಕೆಲವೇ ಕೆಲವು ದಿನಗಳಲ್ಲಿ ಟಿವಿ9 ಕೂಡ ಬಿಟ್ರು. ಆಗ ಒನ್ಸ್ ಅಗೈನ್,‌ ಚಂದನ್ ಈಗ ಎಲ್ಲಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿಗಳದ್ದು. ಆದ್ರೆ, ಇತ್ತ ಚಂದನ್ ಶರ್ಮಾ ಮಾತ್ರ ಸುಮ್ನೆ ಕೂತಿರ್ಲಿಲ್ಲ.‌ ತಮ್ಮ‌ ಕ‌ನಸಿನ ಗಿಡಕ್ಕೆ ನೀರೆರೆಯುತ್ತಾ ಕೂತಿದ್ರು. ಈಗ ಆ ಗಿಡ ಹೂ ಬಿಡಲು ಆರಂಭಿಸಿದೆ…!
ಯಸ್, ಚಂದನ್ ಶರ್ಮಾ ಬರೋಬ್ಬರಿ ಒಂಭತ್ತು ತಿಂಗಳ ನಂತ್ರ ಕಮ್ ಬ್ಯಾಕ್ ಮಾಡ್ತಿದ್ದಾರೆ. ಅದೂ ‘ಪವರ್ ‘ ಫುಲ್ ಆಗಿ.‌ ಹ್ಞೂಂ, ಕನ್ನಡಕ್ಕೆ ಚಂದನ್ ಶರ್ಮಾ ಅವರ ಸಾರಥ್ಯದಲ್ಲಿ ಹೊಸ ಸುದ್ದಿವಾಹಿನಿ ಬರ್ತಾ ಇದೆ. ಅದೇ ‘ಪವರ್ ಟಿವಿ’.

ಚಂದನ್ ಶರ್ಮಾ ಅವ್ರ ಲೀಡರ್ ಶಿಪ್ ನಲ್ಲಿ ಬರ್ತಿರೋ ಚಾನಲ್ ಅಂದ್ರೆ‌ ಸಾಧಾರಣಾ ಚಾನಲ್ ಆಗಿರ್ಲಿಕ್ಕೆ ಸಾಧ್ಯನೇ ಇಲ್ಲ.‌ ಹೆಸರಿಗೆ ತಕ್ಕಂತೆ ‘ಪವರ್ ‘ ಫುಲ್ ಆಗಿ ನೋ ನಾನ್ಸೆಸ್ ಅನ್ನೋ ಟ್ಯಾಗ್ ಲೈನ್ ನೊಂದಿಗೆ ಸದ್ದು ಮಾಡಲು ರೆಡಿಯಾಗಿದೆ.
ನಮ್ಮಲ್ಲಿ ನೋ ನಾನ್ಸೆನ್ಸ್ ಓನ್ಲಿ ನ್ಯೂಸ್ ಸೆನ್ಸ್ ಅಂತ ಹೇಳ್ತಿದೆ ಚಂದನ್ & ಟೀಂ.

ಬೆಂಗಳೂರಿನ ಇನ್ ಫೆಂಟ್ರಿ ರೋಡಲ್ಲಿರೋ ‘ಎಂಬೆಸಿ ಪಾಯಿಂಟ್ ‘ ನ ಥರ್ಡ್ ಫ್ಲೋರ್ ನಲ್ಲಿ ಚಾನಲ್ ರೆಡಿಯಾಗ್ತಿದೆ.
ಅಕ್ಟೋಬರ್ 19 ರಂದು ಲಾಂಚ್ ಆಗುತ್ತೆ. ನ್ಯೂಸ್ ಚಾನಲ್ ಜೊತೆಗೆ ವೆಬ್ ಪೋರ್ಟಲ್ ಕೂಡ ನ್ಯೂಸ್, ಸ್ಪೆಷಲ್ ಸ್ಟೋರಿಸ್ ಗಳನ್ನ ಹೊತ್ತು ತರಲಿದೆ.
ಇತ್ತೀಚೆಗಷ್ಟೇ ಫಸ್ಟ್ ಪ್ರೋಮೋ ರಿಲೀಸ್ ಆಗಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿ ಬಿಟ್ಟಿದೆ.


ಹೊಸ ಚಾನಲ್ ಬಗ್ಗೆ ಚಂದನ್ ಅವ್ರನ್ನು ಮಾತಾಡಿಸಿದಾಗ, ‘ನಮ್ ಚಾನಲ್ ಯಾವ್ದೇ ಪೊಲಿಟೀಶಿಯನ್ ಗೆ ಸಂಬಂಧ ಪಡಲ್ಲ. ಕ್ರೈಂ ಅನ್ನು ವೈಭವೀಕರಿಸಲ್ಲ.‌ ಕಂಡ್ ಕಂಡವರ ಮನೆ ಬೀದಿ ಜಗಳನಾ ತಂದು ಉಣಬಡಿಸಲ್ಲ. ಸ್ವಸ್ಥ ಸಮಾಜದ ಕಲ್ಪನೆಯೊಂದಿಗೆ ಬರ್ತಿದ್ದೀವಿ. ಜನ ಇಷ್ಟು ದಿನ ಎಂಥಾ ಚಾನಲ್ ಬೇಕು ಅಂತ ನಿರೀಕ್ಷೆ ಮಾಡ್ತಿದ್ರೋ ಅಂಥಾ ಚಾನಲ್ ನಮ್ದಾಗುತ್ತೆ’ ಅಂತ ಹೇಳಿದ್ರು.
ಎಷ್ಟೋ ಚಾನಲ್ ಗಳು ಲಾಂಚ್ ಆಗಿದ್ರೂ ಕೂಡ ಎಲ್ಲರ ಮನೆಯ ಟಿವೀಲಿ ಕಾಣ್ಸೋದೇ ಇಲ್ಲ. ಆದ್ರೆ, ಪವರ್ ಟಿವಿ ಆರಂಭದಲ್ಲೇ ಬಹುತೇಕ ನಿಮ್ಮಲ್ರ ಮನೆಗೂ ತಲುಪುತ್ತೆ.‌ ವಿಥ್ ನ್ಯೂಸ್ ಸೆನ್ಸ್….


ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top