ಗೆಳೆಯ ವಿರಾಟ್‌ ಕೊಹ್ಲಿ ಆಟಕ್ಕೆ ಮನಸೋತ ಎಬಿ ಡಿವಿಲಿಯರ್ಸ್‌

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ 20 ಸರಣಿಯಲ್ಲಿ ಭಾರತ ೨-೦ ಅಂತರದಿಂದ ಟಿ 20 ಸರಣಿಯನ್ನು ವಶಮಾಡಿಕೊಂಡಿದೆ. ನಿನ್ನೆ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 195ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 6 ವಿಕೆಟ್‌ಗಳ ಜಯವನ್ನು ಸಾಧಿಸಿತು.

ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಚೇಸಿಂಗ್‌ ವೇಳೆ 360 ಡಿಗ್ರಿ ಶಾಟ್‌ ಹೊಡೆದಿದ್ದು, ಇದೀಗ ಈ ಶಾಟ್‌ ಬಗ್ಗೆ ಎಲ್ಲರ ಚರ್ಚೆ ವಿಷಯವಾಗಿದೆ. ಕ್ರಿಕೆಟ್‌ ಜಗತ್ತಿನಲ್ಲಿ 360 ಡಿಗ್ರಿ ಅಂತಾನೇ ಖ್ಯಾತಿ ಹೊಂದಿರೋ ನಮ್ಮ ಆರ್‌ಸಿಬಿ ತಂಡದ ಆಪತ್ಭಾಂಧವ ಎ ಬಿ ಡಿವಿಲಿರ್ಯಸ್‌ ಅವರ ಸಿಗ್ನೇಚರ್‌ ಶಾಟ್‌ ವಿರಾಟ್‌ ಕಾಪಿ ಮಾಡಿದ್ದು. ವಿರಾಟ್‌ ಸ್ಕೂಪ್‌ ಶಾಟ್‌ ಮಾಡುವ ಮೂಲಕ ಸಿಕ್ಸರ್‌ ಸಿಡಿಸಿದ್ದಾರೆ. ಮೊದಲ ಬಾರಿಗೆ ಈ ರೀತಿಯ ಶಾಟ್‌ ಅನ್ನು ವಿರಾಟ್‌ ಪರ್ಫೆಕ್ಟ್‌ ಆಗಿ ಹೊಡೆದು ಸಿಕ್ಸರ್‌ ಸಿಡಿಸಿದ್ದು, ಇದೀಗ ವಿರಾಟ್‌ ಎಬಿಡಿ ರೀತಿಯಲ್ಲೇ ಒಂದು ಚೂರು ಬದಲಾವಣೆಯಿಲ್ಲದೇ ಈ ಶಾಟ್‌ ಹೊಡೆದಿದ್ದಾರೆ ಅಂತ ಹೇಳುತ್ತಿದ್ದಾರೆ.

ಮ್ಯಾಚ್‌ ಗೆದ್ದ ಬಳಿಕ ಮಾತನಾಡಿರೋ ನಾಯಕ ವಿರಾಟ್‌ ಕೊಹ್ಲಿ ಎಬಿಡಿ ಅವರ ಸ್ಕೂಪರ್‌ ಶಾಟ್‌ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೆ. ಎಬಿಡಿಗೆ ಮೆಸೇಜ್‌ ನಲ್ಲಿ ನನ್ನ ಸ್ಕೂಪ್‌ ಶಾಟ್‌ ವಿಡಿಯೋ ಕಳಿಹಿಸುತ್ತೇನೆ . ಎಬಿಡಿ ಅವರ ರಿಯಾಕ್ಷನ್‌ಗೆ ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ವಿರಾಟ್‌ ಹೇಳಿದ್ರು.

ಇದೀಗ ವಿರಾಟ್‌ ಅವರ ಶಾಟ್‌ ಬಗ್ಗೆ ಮಿಸ್ಟರ್‌ 360 ಡಿಗ್ರಿ ಪ್ರತಿಕ್ರಿಯೆ ನೀಡಿದ್ದು. ಅವರ ಶಾಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿರಾಟ್‌ ಕೊಹ್ಲಿ ಸ್ಕೂಪ್‌ ಶಾಟ್‌ ಸೂಪರ್‌ ಎಂದು ಹೇಳಿದ್ದಾರೆ.

ಟೀಂ ಇಂಡಿಐಯಾ ಟಿ ೨೦ ಸರಣಿ ಗೆದ್ದ ಬಳಿಗೆ ಇದೀಗ ಇಗ್ಲೆಂಡ್‌ನ ಮಾಜಿ ಆಟಗಾರ ಮೈಕಲ್‌ ವಾನ್‌ ಪೇಚಿಗೆ ಸಿಕ್ಕಿದ್ದಾರೆ. ಹೌದು ಆಸ್ಟ್ರೇಲಿಯಾ ಮತ್ತು ಭಾರತ ಸರಣಿ ಆರಭಂಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದ ಮೈಕಲ್‌ ವಾನ್‌ ಟೀಂ ಇಂಡಿಯಾ ಮೂರು ಮಾದರಿಯ ಸರಣಿಯಲ್ಲೂ ವೈಟ್‌ವಾಷ್‌ ಆಗಲಿದ್ದಾರೆ ಅಂತ ಭವಿಷ್ಯ ನುಡಿದಿದ್ರು, ಆದ್ರೆ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಮೂರನೇ ಪಂದ್ಯ ಗೆಲ್ಲುವ ಮೂಲಕ ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತ್ತು, ಇನ್ನು ಟಿ ೨೦ ಸರಣಿಯಲ್ಲಿ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ, ಇದೀಗ ಈ ವಿಚಾರವಾಗಿ ಮೈಕಲ್‌ ವಾನ್‌ ಮಾತನಾಡಿದ್ದು. ನನ್ನ ಭವಿಷ್ಯ ಕೊಂಚ ತಪ್ಪಾಗಿದೆ ಏಕದಿನ ಸರಣಿ ಸೋತು ಟಿ೨೦ ಸರಣಿ ಗೆದ್ದರು, ಆದರೆ ಟೆಸ್ಟ್‌ ಸರಣಿ ಖಂಡಿತಾ ಸೋಲಲಿದೆ ಟೀಂ ಇಂಡಿಯಾ ಅಂತ ಮತ್ತೆ ಭವಿಷ್ಯ ನುಡಿದಿದ್ದಾರೆ ಮೈಕಲ್‌ ವಾನ್‌.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಟಿ 20 ಪಂದ್ಯದ ವೇಳೆ ಟೀಂ ಇಂಡಿಯಾದ ಕ್ಯಾಪ್ಟನ್‌ ಕೂಲ್‌ ಅವರನ್ನು ನೆನಪಿಸಿದ್ದಾರೆ ಆಸ್ಟ್ರೇಲಿಯಾದ ಆಟಗಾರ, ಹೌದು ಎರಡನೇ ಟಿ 20 ಪಂದ್ಯದ ಸಾರಥ್ಯ ವಹಿಸಿದ್ದ ಆಸ್ಟ್ರೇಲಿಯಾದ ಆಟಗಾರ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ ಧೋನಿಯನ್ನು ಸ್ಮರಿಸಿದ್ದಾರೆ. ಟೀಂ ಇಂಡಿಯಾ ಬ್ಯಾಟಿಂಗ್‌ ವೇಳೆ ಧವನ್‌ ಕೂದಲೆಳೆಯ ಅಂತರದಲ್ಲಿ ಸ್ಟಂಪ್‌ ನಿಂದ ಮಿಸ್‌ ಆದಾಗ ವೇಡ್‌ ಧವನ್‌ ಅವರ ವಿಕೆಟ್‌ ಸಿಗದಿದ್ದು ಕಂಡು ವೇಡ್‌ ನಗುತ್ತಾ ʻ ನಾನು ಧೋನಿಯಲ್ಲ ,ಧೋನಿಯಷ್ಟು ಚುರುಕಿಲ್ಲ ಎಂದು ಧವನ್‌ ಬಳಿ ಹೇಳಿರೋ ಆಡಿಯೋ ಕ್ಯಾಚ್‌ ಆಗಿದ್ದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ, ಇನ್ನು ವೇಡ್‌ ಹೀಗೆ ಹೇಳುತ್ತಿದ್ದಂತೆ ಧವನ್‌ ವೇಡ್‌ ಅವರನ್ನು ನೋಡಿ ನಗು ಬೀರಿದ್ರು. ಆ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಧೋನಿಗಿಂತ ಉತ್ತಮ ಕೀಪರ್‌ ಇನ್ನೊಬ್ಬರಿಲ್ಲ ಅನ್ನೋದು ಕ್ರಿಕೆಟ್‌ ಅಭಿಮಾನಿಗಳ ಮಾತಾಗಿದೆ.

ನಿನ್ನೆಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹೊಡೆದ ಎಬಿಡಿ ಶಾಟ್‌ ಹೇಗಿತ್ತು, ಮೈಕಲ್‌ ವಾನ್‌ ಅವರ ಭವಿಷ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು..ಎಂ ಎಸ್‌ ಧೋನಿಯನ್ನು ಟೀಂ ಇಂಡಿಯಾದಲ್ಲಿ ಮಿಸ್‌ ಮಾಡಿಕೊಳ್ತಾ ಇದ್ದೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top