ಗುಂಡಿ ಬಿದ್ದ ರಸ್ತೆಗೆ ರಂಗೋಲಿ ಹಾಕಿ ಶೆಟ್ಟರ್ ಫೋಟೋ ಇಟ್ಟು ಪ್ರತಿಭಟನೆ

ಗುಂಡಿ ಬಿದ್ದ ರಸ್ತೆ ಮತ್ತು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಗುಂಡಿ ಬಿದ್ದ ರಸ್ತೆಗಳಿಗೆ ರಂಗೋಲಿಯನ್ನು ಹಾಕಿ ಜಿಲ್ಲಾ ಉಸ್ತುವಾಗಿ ಸಚಿವ ಜಗದೀಶ್ ಶೆಟ್ಟರ್ ಅವರ ಭಾವಚಿತ್ರವನ್ನು ಗುಂಡಿಗೆ ಇಟ್ಟು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿರೋ ಘಟನೆ ಹುಬ್ಬಳ್ಳಿ ನಗರದ ವಿದ್ಯಾವನ ನಿವಾಸಿಗಳು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಮಳೆ ಬಂದು ರಸ್ತೆಗಳು ಗುಮಡಿ ಬಿದ್ದಿದ್ದು , ರಸ್ತೆಯಲ್ಲಿ ಓಡಾಡಲು ಸಹ ಸಾಧ್ಯವಾಗದ ರೀತಿ ಇದ್ದು, ಇದರಿಂದಾಗಿ ರಸ್ತೆ ಗುಂಡಿ ಮತ್ತು ತಿಪ್ಪೆಯಲ್ಲಿ ಜಗದೀಶ್ ಶೆಟ್ಟರ್ ಅವರ ಫೋಟೋ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮಹಾನಗರ ಪಾಲಿಕೆ ಕೂಡಲೇ ರಸ್ತೆ ದುರಸ್ತಿ ಹಾಗೂ ಕಸ ನಿರ್ವಹಣೆ ಮಾಡುವಂತೆ ಸಾರ್ವಜನಿಕರು ವಿಭಿನ್ನ ರೀತಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top