
ಕೊರೋನಾದಿಂದಾಗಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ ಗಾಯಕ ಬ್ರಹ್ಮ ಎಸ್ಪಿ ಬಾಲಸುಬ್ರಹ್ಮಣ್ಯಂ ಇಂದು ಇಹಲೋಕ ತೆಜಿಸಿದ್ದಾರೆ. ಕೊರೋನಾ ಪಾಸಿಟಿವ್ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿಬಿ ಒಂದುವರೆ ತಿಂಗಳಿನಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿ ಇಂದು ನಮ್ಮನ್ನಗಲಿದ್ದಾರೆ. ಎಸ್ಬಿಪಿ ಇದುವರೆಗೂ 15 ಭಾಷೆಗಳಲ್ಲಿ ಸುಮಾರು 40000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, ಆಂಧ್ರದಲ್ಲಿ ಜನಿಸಿದ ಎಸ್ಬಿಪಿ ಹಿನ್ನೆಲೆ ಗಾಯಕರಾಗಿ ಹಾಡಿದ ಎರಡನೇ ಹಾಡು ಅದು ಕನ್ನಡದಲ್ಲಿ ಆಗಿತ್ತು. ಕನ್ನಡ ಮತ್ತು ಕನ್ನಡಿಗರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಎಸ್ಪಿಬಿ ಕನ್ನಡದಲ್ಲಿ ಅತೀ ಹೆಚ್ಚು ಹಾಡು ಹಾಡಿದ್ದಾರೆ. ಇತ್ತಿಚೆಗೆ ಮಾಯಾ ಬಜಾರ್ ಚಿತ್ರದಲ್ಲಿ ʻಲೋಕ ಮಾಯಾ ಬಜಾರುʼ ಹಾಡನ್ನು ಹಾಡಿದ್ರು, ಈ ಹಾಡಿಗೆ ಪುನೀತ್ ರಾಜ್ಕುಮಾರ್ ಡ್ಯಾನ್ಸ್ ಮಾಡಿದ್ರು.