ಗಣೇಶ್‌ಗೆ ನಾಯಕಿಯಾದ ಜೊತೆಜೊತೆಯಲಿ ನಾಯಕಿ ಅನು ಸಿರಿಮನೆ

ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿ ಅಂದ್ರೆ ಅದು ಅನಿರುದ್ಧ್‌ ನಟನೆಯ ʻ ಜೊತೆ ಜೊತೆಯಲಿʼ ಧಾರಾವಾಹಿ. ಈ ಧಾರಾವಾಹಿಯಲ್ಲಿ ಇನ್ನೊಂದು ಪ್ರಮುಖ ಪಾತ್ರ ಅಂದ್ರೆ ಅದು ಅನು ಸಿರಿಮನೆ . ಅನು ಸಿರಿಮನೆ ಪಾತ್ರ ಮತ್ತು ಆಕೆಯ ಮುಗ್ಧತೆ ಸಿರೀಯಲ್‌ ಪ್ರಿಯರಿಗೆ ಸಖತ್‌ ಇಷ್ಟವಾಗಿದ್ದು, ಅನು ಸಿರಿಮನೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋ ಮೇಘನಾ ಶೆಟ್ಟಿ ಈಗಲೇ ಕರ್ನಾಟಕದ ಮನೆಮಗಳಾಗಿದ್ದಾರೆ. ತಮ್ಮ ಮೊದಲ ಸೀರಿಯಲ್‌ ಮೂಲಕನೇ ಹೆಚ್ಚು ಜನಪ್ರಿಯಾತೆ ಪಡೆದಿರೋ ಮೇಘನಾ ಶೆಟ್ಟಿ ಇದೀಗ ಕಿರುತೆರೆಯಿಂದ ಬೆಳ್ಳಿತೆರೆ ಪ್ರಮೋಷನ್‌ ಪಡೆದುಕೊಳ್ತಿದ್ದಾರೆ. ಹೌದು ಮೇಘನಾ ಇದೀಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೋಡಿಯಾಗಿ ʻತ್ರಿಬಲ್‌ ರೈಡಿಂಗ್‌ʼ ಹೊರಡಲು ರೆಡಿಯಾಗುತ್ತಿದ್ದಾರೆ.

ಹೌದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಮುಂದಿನ ಸಿನಿಮಾ ʻತ್ರಿಬಲ್‌ ರೈಡಿಂಗ್‌ʼ ಆಗಿದ್ದು ಈ ಸಿನಿಮಾದಲ್ಲಿ ಮೂರು ಜನ ಗಣೇಶ್‌ಗೆ ನಾಯಕಿಯರಿದ್ದಾರೆ. ಅದರಲ್ಲಿ ಜೊತೆಜೊತೆಯಲಿ ಖ್ಯಾತಿಯ ಮೇಘನಾ ಶೆಟ್ಟಿ ಕೂಡ ಒಬ್ಬ ನಾಯಕಿಯಾಗಿದ್ದು, ಆ ಮೂಲಕ ಕಿರುತೆರೆಯಿಂದ ಬೆಳ್ಳಿ ತೆರೆಮೇಲೆ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲು ಈ ಮುದ್ದು ಹುಡುಗಿ ರೆಡಿಯಾಗುತ್ತಿದ್ದಾರೆ. ಕಿರುತೆಯಲ್ಲಿ ಒಂದೊಳ್ಳೇ ಕಥೆಯ ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದ ಮೇಘನಾ ಶೆಟ್ಟಿ ಇದೀಗ ಬೆಳ್ಳಿತೆರೆಯಲ್ಲಿ ಸಿನಿಪ್ರಿಯರ ಮನಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ.

ಇನ್ನು ʻತ್ರಿಬಲ್‌ ರೈಡಿಂಗ್‌ʼ ಸಿನಿಮಾಗೆ ʻರಗಡ್‌ʼ ಸಿನಿಮಾ ಖ್ಯಾತಿಯ ಮಂಜುಗೌಡ ಆಕ್ಷನ್‌ ಕಟ್‌ ಹೇಳ್ತಾ ಇದ್ದು ಚಿತ್ರದಲ್ಲಿ ರಂಗಾಯಣ ರಘು,ಸಾಧುಕೋಕಿಲ,ಕುರಿ ಪ್ರತಾಪ್‌,ತಬಲ ನಾಣಿ, ಡಿಂಗ್ರಿ ನಾಗರಾಜ್‌ ಸೇರಿದಂತೆ ಅನೇಕರು ನಟಿಸುತ್ತಿದಾರೆ. ಚಿತ್ರದ ಶೂಟಿಂಗ್‌ ಅಕ್ಟೋಬರ್‌ ಎರಡನೇ ವಾರದಲ್ಲಿ ಶುರುವಾಗಲಿದ್ದು. ತ್ರಿಬಲ್‌ ರೈಡಿಂಗ್‌ ಸಿನಿಮಾದ ಮೂಲಕ ಕಿರುತೆರೆಯಿಂದ ಬೆಳ್ಳಿ ತೆರೆಗೆ ಮತ್ತೊಬ್ಬ ನಾಯಕ ನಟಿ ಎಂಟ್ರಿ ಕೊಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top