ಗಂಡ ತಲಾಕ್‌ ನೀಡಿದ ಕೆಲವೇ ನಿಮಿಷದಲ್ಲಿ ಸೊಸೆಯನ್ನು ಅತ್ಯಾಚಾರ ಮಾಡಿದ ಮಾವ..!

ಗಂಡ ತಲಾಕ್‌ ನೀಡಿ ಇನ್ನು ಕೆಲವು ಗಂಟೆಗಳಲ್ಲೇ ಗಂಡನ ಅಪ್ಪನಿಂದ ಅತ್ಯಾಚಾರಕ್ಕೆ ಒಳಗಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
2015ರಲ್ಲಿ ಮದುವೆಯಾಗಿದ್ದ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಒಂದು ವರ್ಷದಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮವನ್ನು ಸಹ ನೀಡಿದ್ದಳು.. ಇನ್ನು ಗಂಡ ಮತ್ತು ಗಂಡನ ಮನೆಯವರು ಮಹಿಳೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಅದರೆ ವರದಕ್ಷಿಣೆ ತರಲು ಒಪ್ಪದ ಮಹಿಳೆಯನ್ನು ನ.20ರಂದು ಗಂಡ ಮತ್ತು ಅವನ ಕುಟುಂಬಸ್ಥರು ಆಕೆಯನ್ನು ಒಂದು ರೂಮಿನಲ್ಲಿ ಕೂಡಿ ಹಾಕಿದ್ದರು, ಅಲ್ಲದೇ ವರದಕ್ಷಿಣೆ ತರುವಂತೆ ಅವಳ ಮೇಲೆ ಹಲ್ಲೆಯನ್ನು ಸಹ ಮಾಡಿದ್ದರು. ನಂತರ ನ.22ರಂದು ಗಂಡ ಮನೆಗೆ ಬಂದವನೆ ಪತ್ನಿಯ ಬಳಿ ಹೋಗಿ ತಲಾಕ್‌ ನೀಡಿದ್ದಾನೆ. ತಲಾಕ್‌ ನೀಡಿದ ದಿನವೇ ರಾತ್ರಿ ವೇಳೆ ಗಂಡನ ತಂದೆ ಮತ್ತು ಆತನ ಸಂಬಂಧಿಕರು ಮಹಿಳೆ ಇದ್ದ ರೂಮಿಗೆ ನುಗ್ಗಿ ಆಕೆಗೆ ಗನ್‌ ತೋರಿಸಿ ಸಾಮೂಹಿಕವಾಗಿ ಅತ್ಯಾಚಾರವನ್ನು ಎಸಗಿದ್ದಾರೆ.

ಇನ್ನು ಈ ವಿಚಾರವಾಗಿ ಮಹಿಳೆ ಬೆಳಗ್ಗೆ ತನ್ನ ತಂದೆ ಫೋನ್‌ ಮಾಡಿ ಮಾಹಿತಿ ತಿಳಿಸಿದ್ದು. ತಂದೆ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಮಹಿಳೆಯನ್ನು ರಕ್ಷಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top