ಗಂಡು ಮಗು ಆಗಿಲ್ಲವೆಂದು.. ಮಗಳನ್ನೇ ಅತ್ಯಾಚಾರವೆಸಗಿದ ತಂದೆ..!

ಮಗಳನ್ನೇ ಅತ್ಯಾಚಾರವೆಸಗಿದ ಘಟನೆಯೊಂದು ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಸಿರ್ಸೋಡಾ ಗ್ರಾಮದಲ್ಲಿ ನಡೆದಿದೆ. ತನಗೆ ಗಂಡು ಮಗುವಾಗಿಲ್ಲ ಹೆಣ್ಣುಮಗುವಾಗಿದೆ ಎಂದು ಬೇಸರಗೊಂಡಿದ್ದ ತಂದೆ. ಹಲವು ವರ್ಷಗಳಿಂದ ಆ ಹೆಣ್ಣುಮಗಳಿಗೆ ಕಿರುಕುಳ ನೀಡುತ್ತಿದ್ದ ಈತ. ತನ್ನ ಪತ್ನಿಯನ್ನು ಸಹ ಮನಬಂದಂತೆ ಥಳಿಸುತ್ತಿದ್ದ.. ಇನ್ನು ಇದೇ ಶನಿವಾರ ತಾಯಿಯನ್ನು ಒಂದುಕೋಣೆಯಲ್ಲಿ ಕೂಡಿ ಹಾಕಿ ಇನ್ನೊಂದು ಕೋಣೆಯಲ್ಲಿ ಮಗಳನ್ನು ಥಳಿಸಿ ನಂತರ ಅತ್ಯಾಚಾರವೆಸಗಿದ್ದಾನೆ.

ಇನ್ನು ಪೊಲೀಸರಿಗೆ ಮಾಹಿತಿ ತಿಳಿಸಿದ ಪತ್ನಿ, ಪೊಲೀಸರು ಸ್ಥಳಕ್ಕೆ ಧಾವಿಸುವ ವೇಳೆಗಾಗಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ..ಅಲ್ಲದೇ ಮಗಳನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನಂತೆ..ಇನ್ನು ಪತ್ನಿ ಮತ್ತು ಮಗಳು ಆರೋಪಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದು ಆರೋಪಿಯ ಹುಡುಕಾಟದಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top