ಗಂಡು ಮಗುವಿಗಾಗಿ 1ತಿಂಗಳ ಹೆಣ್ಣು ಮಗು ಕೊಂದ ತಾಯಿ..

ಒಂದು ತಿಂಗಳ ಹಿಂದೆ ಜನಿಸಿದ್ದ ಹೆಣ್ಣು ಮಗುವನ್ನು ತನಗೆ ಗಂಡು ಮಗು ಬೇಕು ಎಂದು ಹೇಳಿ ಸಾಯಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಸರಿತಾ ಕೊಲೆ ಆರೋಪಿ, ಈಕೆ ೧೪ ತಿಂಗಳ ಹಿಂದೆ ಸಚಿನ್‌ ಮೆವಾಡ ಎಂಬುವವರ ಜೊತೆ ಮದುವೆಯಾಗಿದ್ದು ಒಂದು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು, ಆದ್ರೆ ಸರಿತಾಗೆ ಹೆಣ್ಣು ಮಗು ಆಗಿದ್ದು ಬೇಸರ ತರಿಸಿತ್ತು, ಆಕೆ ಗಂಡು ಮಗುವಿನ ಆಸೆಯಲ್ಲಿ ಇದ್ದಳು, ಇನ್ನು ಆ ಮಗು ಜನಿಸಿದ ದಿನದಿಂದ ಅಷ್ಟೇನು ಪ್ರೀತಿಯಿಂದ ಆ ಮಗುವನ್ನು ನೋಡಿಕೊಳ್ಳುತ್ತಿರಲಿಲ್ಲ, ಒಂದು ದಿನ ಮನೆಯಲ್ಲಿ ಯಾರು ಇಲ್ಲದಾಗ ಒಂದು ತಿಂಗಳ ಹೆಣ್ಣುಮಗುವನ್ನು ನೀರಿನ ಟ್ಯಾಂಕಿಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ನಂತರ ಮಗು ಕಾಣಿಸುತ್ತಿಲ್ಲ ಎಂದು ಕಿರುಚಾಡಲು ಶುರುಮಾಡಿದ್ದಾಳೆ.

ಇತ್ತ ಗಂಡ ಮತ್ತು ಅತ್ತೆ ಮಾಮ ಹೊಲಕ್ಕೆ ಹೋಗಿದ್ದರು, ಬಂದ ನಂತರ ವಿಷಯ ತಿಳಿದು ಊರೆಲ್ಲ ಹುಡುಕಿದ್ದಾರೆ, ಅಲ್ಲದೇ ಯಾವುದಾದರು ಪ್ರಾಣಿ ತಿಂದಿದೆಯ ಅನ್ನೋ ಅನುಮಾನ ಕೂಡ ಮಾಡಿದ್ದಾರೆ.

ನಂತರ ಮನೆಯಲ್ಲ ಶೋಧಕಾರ್ಯ ಮಾಡಿದಾಗ ಮಗುವಿನ ಮೃತ ದೇಹ ೫೦ ಲೀಟರ್‌ನ ಟ್ಯಾಂಕಿಯಲ್ಲಿ ಪತ್ತೆಯಾಗಿತ್ತು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಮಗುವನ್ನು ಕಳೆದುಕೊಂಡಿದ್ದರು ಸರಿತಾ ಸುಮ್ಮನಿರುವುದನ್ನು ಗಮನಿಸಿ ಪೊಲೀಸರಿಗೆ ಅನುಮಾನ ಶುರುವಾಯಿತು, ಇದೇ ವೇಳೆ ಸರಿತಾ ಅತ್ತೆ ಮಾವ ಆಕೆಗೆ ಗಂಡು ಮಗು ಬೇಕು ಎಂದು ಹೇಳುತ್ತಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದರು, ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಸರಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ಸರಿತಾ ವಿವರಿಸಿದ್ದಾಳೆ. ಸದ್ಯ ೨೫ ವರ್ಷದ ಸರಿತಾ ಒಂದು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top