ಗಂಡು ಮಗುವಾಗಿಲ್ಲವೆಂದು 17 ದಿನದ ಮಗುವನ್ನು ಕೊಂದ ಪಾಪಿ ತಂದೆ..!

ತನಗೆ ಗಂಡು ಮಗು ಹುಟ್ಟಲಿಲ್ಲವೆಂದು ಸಿಟ್ಟಾದ ತಂದೆಯೊಬ್ಬ 17ದಿನದ ಹೆಣ್ಣು ಮಗುವನ್ನು ಜೀವವಂತವಾಗಿ ಮಣ್ಣು ಮಾಡಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 29ವರ್ಷದ ವರದರಾಜ್‌ ಪಾಪಿ ತಂದೆಯಾಗಿದ್ದಾನೆ. ತಮಿಳುನಾಡಿನ ವಿಲ್ಲಪುರಂ ಜಿಲ್ಲೆಯಲ್ಲಿ ಈ ಘಟನೆ ನಡಿದ್ದಿದ್ದು, ಮಂಗಳವಾರ ರಾತ್ರಿ ತಾಯಿ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡುಹೊಗಿದ್ದ ವರದರಾಜನ್‌..ಮನೆಯಿಂದ ಸುಮಾರು ದೂರದಲ್ಲೇ ಇದ್ದ ನದಿಯೊಂದರ ದಡದಲ್ಲಿ ಗುಂಡಿ ತಗೆದು ಮಗುವನ್ನು ಅದರಲ್ಲಿ ಮಲಗಿಸಿ ಮಣ್ಣು ಮುಚ್ಚಿ ಬಂದಿದ್ದಾನೆ.

ಇನ್ನು ತಾಯಿ ಬೆಳಗ್ಗೆ 4ಗಂಟೆ ವೇಳೆಗೆ ಎದ್ದು ಪಕ್ಕದಲ್ಲಿ ಮಲಗಿದ್ದ ಮಗು ಇಲ್ಲದಿದ್ದನ್ನು ಕಂಡು ಕಿರುಚಾಡಲು ಪ್ರಾರಂಭಿಸಿದ್ದಾಳೆ. ಅಲ್ಲದೇ ತಾಯಿಯ ಅಳಲು ಕೇಳಿದ ಅಕ್ಕ ಪಕ್ಕದ ಜನ ಬಂದು ಮಗುವನ್ನು ಹುಡುಕಲು ಪ್ರಾರಂಭಿಸುತ್ತಾರೆ, ಅಲ್ಲದೇ ಪೊಲೀಸರಿಗೂ ದೂರು ನೀಡುತ್ತಾರೆ, ಇನ್ನು ವಿಷಯ ಗಂಭೀರವಾಗುತ್ತಿದ್ದಂತೆ ಮಗುವಿನ ತಂದೆ ಮಾಡಿದ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡು , ಮಗುವಿದ್ದ ಜಾಗವನ್ನು ತೋರಿಸಿದ್ದಾನೆ.ಬಳಿಕ ಪೊಲೀಸರು ಹಾಗೂ ಊರಿನ ಪ್ರಮುಖರ ಸಮ್ಮುಖದಲ್ಲಿ ಆ ಮಗುವನ್ನು ಗುಂಡಿಯಿಂದ ಹೊರತೆಗೆದಾಗ ಮಗು ಬದುಕುಳಿದಿರಲಿಲ್ಲ..

ಇನ್ನು ಕುಟುಂಬದವರು ಮಾಹಿತಿ ನೀಡಿರುವ ಪ್ರಕಾರ , ವರದರಾಜನ್‌ಗೆ ಹೆಣ್ಣು ಮಗು ಆಗಿರುವುದು ಆತನಿಗೆ ಇಷ್ಟವಿರಲಿಲ್ಲ, ಅಲ್ಲದೇ ಮೂರೇ ದಿನಕ್ಕೆ ಆ ಮಗುವನ್ನು ಕೊಲ್ಲಲು ವರದರಾಜನ್‌ ಮುಂದಾಗಿದ್ದನಂತೆ. ಅದು ಕುಟುಂಬದವರಿಗೆ ತಿಳಿದು ಮಗುವನ್ನು ರಕ್ಷಿಸಿದ್ದು. ಗಂಡು ಮಗುವೇ ಬೇಕು ಎಂದಿದ್ದ ವರದರಾಜನ್‌ ನಾನು ಅದನ್ನು ಒಪ್ಪುವುದಿಲ್ಲ ಅಂತ ಹೇಳಿದ್ದನಂತೆ. ಇನ್ನು ಈ ದಂಪತಿಗಳು ಮದುವೆಯಾಗಿ ಕೇವಲ 15 ತಿಂಗಳು ಅಷ್ಟೇ ಆಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top